ಆಶಾಢ ಶುಕ್ರವಾರ ಹಿನ್ನೆಲೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ನಟ ದರ್ಶನ್..
ಮೈಸೂರು: ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ನಟ ದರ್ಶನ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.
ಸ್ನೇಹಿತರೊಂದಿಗೆ ಬಂದು ದೇವಿಯ ಆಶೀರ್ವಾದ ಪಡೆದ ನಟನನ್ನು ಕಂಡು ಅಭಿಮಾನಿಗಳು ಸುತ್ತುವರಿದರು. ದರ್ಶನ್ರನ್ನು ಕಂಡು ಅಭಿಮಾನಿಗಳು ಹರ್ಷೋದ್ಗಾರ ವ್ಯಕ್ತಪಡಿಸಿದರು. ನಟನನ್ನು ಒಳಗಡೆ ಬಿಡಲು, ಅಭಿಮಾನಿಗಳನ್ನು ನಿಯಂತ್ರಿಸಲು ನೂಕುನುಗ್ಗಲು ಉಂಟಾಗಿ ಪೊಲೀಸರು ಹರಸಾಹಸ ಪಡಬೇಕಾಯಿತು.
ನಂತರ ಚಾಮುಂಡಿದೇವಿ ಆಶೀರ್ವಾದ ಪಡೆದು ದರ್ಶನ್ ವಾಪಸಾದರು.
ವರದಿ – ಹೋಮೇಶ್,ಮಣಗಲಿ.