ಛತ್ರಿ ಹಿಡಿದೆ ಪಾಠ ಕೇಳುತ್ತಿರುವ ಸರ್ಕಾರಿ ಶಾಲಾ ಮಕ್ಕಳು ; ಜನಪ್ರತಿನಿಧಿಗಳೇ ಇತ್ತ ಗಮನ ಹರಿಸಿ..

ಮಾಜಿ ಪ್ರಧಾನಿಗಳ ತವರು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಹೋಬಳಿ ಕೇಂದ್ರದಲ್ಲಿರುವ ಸರಕಾರಿ ಪ್ರೌಢಶಾಲೆಯಲ್ಲಿನ ಕೊಠಡಿಗಳು ಮಳೆಗೆ ಸೋರುತ್ತಿದ್ದು ವಿದ್ಯಾರ್ಥಿಗಳು ಕೊಡೆ ಹಿಡಿದು ಪಾಠ ಕೇಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಶಾಲೆಯಲ್ಲಿರುವ ಎಂಟು ಕೊಠಡಿಗಳಲ್ಲಿ ಎರಡು ಕಚೇರಿ ಉಪಯೋಗಕ್ಕೆ ಬಳಕೆಯಾದರೆ, ಮೂರು ಕೊಠಡಿಗಳಲ್ಲಿ ಮಳೆಗಾಲದಲ್ಲಿ ಚಾವಣಿಯಿಂದ ನೀರು ವಿಪರೀತವಾಗಿ ಸೋರುತ್ತದೆ. ಹಾಗಾಗಿ ಮೂರು ಕೊಠಡಿಗಳಲ್ಲೇ ಪಾಠ-ಪ್ರವಚನ. ಮಳೆಗಾಲ ಆರಂಭವಾದರೆ ಶಾಲೆಗೆ ಕೊಡೆ (ಛತ್ರಿ) ತರುವುದನ್ನು ಮಕ್ಕಳು ಮರೆಯುವಂತಿಲ್ಲ. ಕೊಡೆಯಿಲ್ಲದಿದ್ದರೆ ಪಠ್ಯ ಪುಸ್ತಕಗಳು ನೀರಿನಲ್ಲಿ ತೋಯುವುದು ಗ್ಯಾರಂಟಿ. ಹಾಗಾಗಿ ಮಳೆಗಾಲ ಮುಗಿಯುವವರೆಗೂ ತರಗತಿಯಲ್ಲಿ ಛತ್ರಿ ಹಿಡಿದೇ ಪಾಠ ಕೇಳುವ ಪರಿಸ್ಥಿತಿ ಬಂದಿದೆ.ವಿದ್ಯಾರ್ಥಿಗಳೇ ದೇಶದ ಮುಂದಿನ ಭವಿಷ್ಯ ನಿಮ್ಮ ಕೈಯಲ್ಲಿದೆ ಎನ್ನುವ ಅಧಿಕಾರಿಗಳೇ ,ರಾಜಕಾರಣಿಗಳೇ ಇತ್ತ ಗಮನ ಹರಿಸಿ ವಿದ್ಯಾರ್ಥಿಗಳ ಭವಿಷ್ಯ ಉತ್ತಮಗೊಳಿಸಿ..ಇದು ಕಾವೇರಿ ನ್ಯೂಸ್ ನ ಸಾಮಾಜಿಕ ಕಳಕಳಿ….
ವರದಿ – ಹೋಮೇಶ್, ಮಣಗಲಿ.

Leave a Reply

Your email address will not be published. Required fields are marked *