ಸಿದ್ದಗಂಗಾ ಮಠದಲ್ಲಿ ಉನ್ನತ ವ್ಯಾಸಂಗಕ್ಕೆ ಅವಕಾಶ

ಆತ್ಮೀಯ ಬಂಧುಗಳೆ,
ಈ ನಾಡಿನ ಪಾವನ ನೆಲ ಶ್ರೀ ಸಿದ್ಧಗಂಗಾ ಸುಕ್ಷೇತ್ರದಲ್ಲಿ ಕಲಿಯುವುದೆಂದರೆ ಅದು ನಮ್ಮ ಭಾಗ್ಯವೇ ಸರಿ.!!
ಪರಮಪೂಜ್ಯ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಕನ್ನಡ ಪ್ರೇಮಕ್ಕೆ ದರ್ಪಣವಿಡಿದಂತೆ ಇರುವ ಶ್ರೀ ಸಿದ್ಧಲಿಂಗೇಶ್ವರ ಬಿ.ಎ. ಇಂಟಿಗ್ರೇಟೆಡ್ ಕನ್ನಡ ಪಂಡಿತ್ ಪದವಿ ಕಾಲೇಜು. ಕರ್ನಾಟಕದಲ್ಲಿರುವ ಕನ್ನಡ ಭಾಷೆಯ ಏಕೈಕ ಕಾಲೇಜು. ಇದು ತುಮಕೂರು ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿದ್ದು, ಈ ಕಾಲೇಜಿನ ವಿಶೇಷವೆಂದರೆ, ಹತ್ತನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ನೇರವಾಗಿ ಬಿ.ಎ ಪದವಿಯನ್ನು ಪಡೆಯಲು ಅವಕಾಶವಿದೆ. ನಂತರ ಅವರು ಆಸಕ್ತ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಮಾಡುವ ಎಲ್ಲಾ ಅವಕಾಶಗಳಿರುತ್ತವೆ. ಆದ್ದರಿಂದ ಎಲ್ಲಾ ವರ್ಗದ ಆಸಕ್ತ ವಿದ್ಯಾರ್ಥಿಗಳು ಈ ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಉಚಿತ ಊಟ,ವಸತಿ ಸೌಕರ್ಯವಿರುತ್ತದೆ.‌ ವಿದ್ಯಾರ್ಥಿನಿಯರಿಗೂ ಪ್ರತ್ಯೇಕ ವ್ಯವಸ್ಥೆಯಿರುತ್ತದೆ. ಆದ್ದರಿಂದ ಬಡ ವಿದ್ಯಾರ್ಥಿಗಳು ಹಾಗೂ ಆಸಕ್ತ ಮನಸುಗಳು ನಿಮ್ಮ ನೆರೆ ಹೊರೆಗಳಲ್ಲಿ ಕಂಡುಬಂದರೆ ಅವರಿಗೆ ಈ ಮಾಹಿತಿ ನೀಡಿ ಶ್ರೀ ಸಿದ್ಧಗಂಗಾ ಮಠಕ್ಕೆ ಕಳಿಸಿಕೊಡಿ..
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರತಿಯೊಬ್ಬರ ಪಾತ್ರ ಅಮೂಲ್ಯ..ಹಾಗಾಗಿ ನಿಮ್ಮದೂ ಒಂದು ಸೇವೆ ಸಲ್ಲಲಿ..
ಹೆಚ್ಚಿನ ಮಾಹಿತಿಗಾಗಿ ಜಂಗಮವಾಣಿಗೆ ಕರೆಮಾಡಿ..
9481243009
9844782700

Leave a Reply

Your email address will not be published. Required fields are marked *