ಕಿರಿದಾದ ತಿರುವು ರಸ್ತೆ ಮತ್ತು ಬೇಲಿ ಬದಿಯ ಗಿಡಗಳಿಂದ ಹೆಚ್ಚುತ್ತಿರುವ ಅನಾಹುತಗಳು

  1. ಹಾಸನ ಜಿಲ್ಲೆಯ ಗಡಿಭಾಗ ಹೊಸೂರು ಸಮೀಪದ ಈಚಲಬೀಡು ಗ್ರಾಮದ ಬಳಿ ಕಿರಿದಾದ ತಿರುವು ರಸ್ತೆ ಇದ್ದು ಎದುರಿನಿಂದ ಬರುವ ವಾಹನಗಳು ಕಾಣದಂತೆ ರಸ್ತೆ ಪಕ್ಕದ ಬೇಲಿಯ ಗಿಡಗಳು ಬೆಳೆದು ನಿಂತಿದ್ದು ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ.ಆಗಾಗ ಇಲ್ಲಿ ಅಪಘಾತಗಳು ನೆಡೆಯುತ್ತಲೇ ಇರುತ್ತವೆ.ಇಂದು ಸಹ ಇದೆ ರೀತಿಯ ಘಟನೆ ನೆಡೆದಿದ್ದು ಸೋಮವಾರಪೇಟೆಯಿಂದ ಹಾಸನಕ್ಕೆ ತೆರಳುವ ಕೆ.ಎಸ್. ಆರ್.ಟಿ. ಸಿ ಬಸ್ ಎದುರಿನಿಂದ ಬಂದ ಬೈಕ್ ಸವಾರರಿಗೆ ಡಿಕ್ಕಿ ಹೊಡೆದಿದ್ದು ಅದೃಷ್ಟವಶಾತ್ ಬೈಕ್ ಸವಾರರು ಪರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಜನಪ್ರತಿನಿಧಿಗಳು ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗೃತಾ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಿ ಎಂಬುದೇ ಕಾವೇರಿ ನ್ಯೂಸ್ ನ ಕಳಕಳಿಯ ಮನವಿ.
    ವರದಿ – ಹೋಮೇಶ್,ಮಣಗಲಿ.

Leave a Reply

Your email address will not be published. Required fields are marked *