ಹುಣ್ಣಿಮೆ ಪ್ರಯುಕ್ತ ಟ್ರಾಕ್ಟರ್ ತರಕಾರಿ ದಾನ ಮಾಡಿದ ಭಕ್ತಾದಿಗಳು

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಯಾದಪುರ ಗ್ರಾಮದ ಸಮೀಪವಿರುವ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು ಹುಣ್ಣಿಮೆ ಪ್ರಯುಕ್ತ ಗೀಜೀಹಳ್ಳಿ ಗ್ರಾಮದ ಜನತೆ ಬರುವ ಭಕ್ತಾದಿಗಳಿಗೆ ಪ್ರಸಾದ ತಯಾರಿಸುವ ಸಲುವಾಗಿ ಒಂದು ಟ್ರಾಕ್ಟರ್ ನಷ್ಟು ಶುದ್ಧಗೊಳಿಸಿದ ತರಕಾರಿಯನ್ನು ದಾನ ನೀಡಿದರು.ಈ ಜೇನುಕಲ್ ಸಿದ್ದೇಶ್ವರ ಸ್ವಾಮಿಗಳ ದೇವಾಲಯವು ಬೆಟ್ಟದ ಮೇಲೆ ಇದ್ದು ಸುಮಾರು 400 ಮೆಟ್ಟಿಲುಗಳಿವೆ.ಈ ದೇವಾಲಯಕ್ಕೆ ಹಾಸನ ಜಿಲ್ಲೆಯವರು ಮಾತ್ರವಲ್ಲದೆ ರಾಜ್ಯದ ನಾನಾ ಕಡೆಗಳಿಂದ ಭಕ್ತರು ಹುಣ್ಣಿಮೆಯ ದಿನ 12ಗಂಟೆಯಿಂದಲೇ ದೇವರ ದರ್ಶನಕ್ಕೆ ಮೆಟ್ಟಿಲುಗಳನ್ನು ಹತ್ತಿ ಸರದಿ ಸಾಲಿನಲ್ಲಿ ನಿಂತು ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿಗಳ ದರ್ಶನ ಪಡೆಯುತ್ತಾರೆ.

ವರದಿ – ಹೋಮೇಶ್,ಮಣಗಲಿ.

Leave a Reply

Your email address will not be published. Required fields are marked *