ಮಣಗಲಿ ರಸ್ತೆ ಡಾಂಬರಿಕರಣಕ್ಕೆ ಮನವಿ ನೀಡಲು ಶಾಸಕರನ್ನು ಭೇಟಿ ಮಾಡಲು ಮುಂದಾದ ಕಾವೇರಿ ನ್ಯೂಸ್

ಕೊಡಗು ಜಿಲ್ಲೆಯ ಗಡಿಗ್ರಾಮ  ಹಂಡ್ಲಿ ಪಂಚಾಯತಿ ವ್ಯಾಪ್ತಿಯ ಹಂಡ್ಲಿಯಿಂದ – ಬೆಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಮಣಗಲಿ ಗ್ರಾಮದ ರಸ್ತೆಯೂ ಕಳೆದ ಹಲವು ವರ್ಷಗಳಿಂದ ಮರು ಡಾಂಬರಿಕರಣಗೊಳ್ಳದೆ ಉಳಿದಿದ್ದು ರಸ್ತೆಯೂ ಕಿರಿದಾಗಿ ಮತ್ತು ಸಂಪೂರ್ಣ ಗುಂಡಿಗಳಿಂದ ಕೂಡಿದ್ದು ನಿತ್ಯ ಸಂಚಾರಕ್ಕೆ ತೊಂದರೆಯಾಗುತ್ತಿದೆ.ಈ ರಸ್ತೆಯೂ ಮಣಗಲಿ,ತಾಳೂರು,ಹುಲುಕೋಡು, ಕೋರಗಲ್ಲು, ಹೆಮ್ಮಾನೆ,ಭಂಡಾರ,ಅವರೆದಾಳು,ಬೆಸೂರು,ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ.ಈ ಗ್ರಾಮಗಳ ಜನರು ಹಲವು ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತಂದರು ಏನು ಪ್ರಯೋಜನ ಆಗಿಲ್ಲ.ಈ ಕಾರಣದಿಂದಾಗಿ ಸೋಮವಾರಪೇಟೆ ತಾಲೂಕಿನ ಮಾನ್ಯ ಶಾಸಕರಾದ ಎಂ. ಪಿ. ಅಪ್ಪಚ್ಚು ರಂಜನ್ ಅವರಿಗೆ ಈ ಕುರಿತು ವರದಿ ನೀಡಲು ಕಾವೇರಿ ನ್ಯೂಸ್ ಮುಂದಾಗಿದ್ದು ಶಾಸಕರನ್ನು ಭೇಟಿ ಮಾಡಿ ಮನವಿ ನೀಡಲಿದೆ.

ವರದಿ – ಹೋಮೇಶ್,ಮಣಗಲಿ.

Leave a Reply

Your email address will not be published. Required fields are marked *