ಕೊಡಗು ಆರ್ ಟಿ ಒ ಕಚೇರಿಯಲ್ಲಿ ವಾಹನ್ -4 ತಂತ್ರಾಂಶ ಜಾರಿ

ಮಡಿಕೇರಿ ಜು.28:-ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವಾಹನ್-4 ತಂತ್ರಾಂಶ ಜಾರಿಗೆ ಬಂದಿದ್ದು, ಈ ಹಿನ್ನೆಲೆ ಪ್ರತೀ ತಿಂಗಳ ಮೊದಲನೇ ಗುರುವಾರ ವಿರಾಜಪೇಟೆ, ಪ್ರತೀ ತಿಂಗಳ ಎರಡನೇ ಗುರುವಾರ-ಕುಶಾಲನಗರ, ಪ್ರತೀ ತಿಂಗಳ ಮೂರನೇ ಗುರುವಾರ -ಪೊನ್ನಂಪೇಟೆ, ಪ್ರತೀ ತಿಂಗಳ ನಾಲ್ಕನೇ ಗುರುವಾರ-ಸೋಮವಾರಪೇಟೆ ಈ ದಿನಗಳಂದು ಸಾರ್ವತ್ರಿಕ ರಜಾ ದಿನವಾಗಿದ್ದಲ್ಲಿ ಅದರ ಹಿಂದಿನ ಕಚೇರಿ ಕರ್ತವ್ಯದ ದಿನದಂದು ಶಿಬಿರವನ್ನು ನಡೆಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ ಅವರು ತಿಳಿಸಿದ್ದಾರೆ.
ಕಚೇರಿ ವತಿಯಿಂದ ನಡೆಸಲ್ಪಡುತ್ತಿದ್ದ ಶಿಬಿರಗಳಲ್ಲಿ ಈ ಮುಂದಿನ ಮಾಪರ್ಾಡುಗಳನ್ನು ಮಾಡಲಾಗಿದ್ದು, ಸಾರ್ವಜನಿಕರು ಕ್ಯಾಂಪ್ ದಿನಾಂಕಗಳಂದು ತಮ್ಮ ವಾಹನದ ಅರ್ಹತಾ ಪತ್ರ ಮತ್ತು ನವೀಕರಣೆಯ ಸಂಬಂಧ ವಾಹನಗಳನ್ನು ಹಾಜರು ಪಡಿಸಬಹುದಾಗಿದೆ. ಶಿಬಿರದಲ್ಲಿ ವಾಹನವನ್ನು ತಪಾಸಣೆಗೆ ಹಾಜರುಪಡಿಸುವ ಮುನ್ನ ವಾಹನದ ದಾಖಲಾತಿಗಳನ್ನು ಕಚೇರಿಗೆ ಹಾಜರುಪಡಿಸಿ, ಅಜರ್ಿಯನ್ನು ಗಣಕೀಕೃತದಲ್ಲಿ ಸಲ್ಲಿಸಿ ನಿಗಧಿತ ಶುಲ್ಕವನ್ನು ಕಚೇರಿಯಲ್ಲಿ ಪಾವತಿಸಿ, ರಶೀತಿ ಮತ್ತು ಅಜರ್ಿಯನ್ನು ದಾಖಲಾತಿಗಳೊಂದಿಗೆ, ಶಿಬಿರದಲ್ಲಿ ಹಾಜರಪಡಿಸುವುದು ಕಡ್ಡಾಯವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *