ಮೈಸೂರಿನಿಂದ ಬೆಂಗಳೂರಿಗೆ ಜೀವಂತ ಹೃದಯ ರವಾನೆ

ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಿಂದ ಬೆಳ್ಳಂಬೆಳಗ್ಗೆ ಜೀವಂತ ಹೃದಯವೊಂದು ಬೆಂಗಳೂರಿನ ಎಂ.ಎಸ್.​ ರಾಮಯ್ಯ ಆಸ್ಪತ್ರೆಗೆ ರವಾನೆಯಾಗಿದೆ.

ಮೈಸೂರಿನಿಂದ ಬೆಂಗಳೂರಿನ ಎಂ.ಎಸ್​. ರಾಮಯ್ಯ ಆಸ್ಪತ್ರೆಗೆ ಯಶಸ್ವಿಯಾಗಿ ಹೃದಯ ತಲುಪಿದ್ದು, ರಾಮಯ್ಯ ಆಸ್ಪತ್ರೆಯಲ್ಲಿ ದಾಖಲಾಗಿರುವ 19 ವರ್ಷದ ಯುವಕನಿಗೆ ಹೃದಯ ಕಸಿ‌ ಶಸ್ತ್ರಚಿಕಿತ್ಸೆ ಮಾಡಲಿದೆ.

ಬೆಂಗಳೂರಿನ ಯುವಕನೋರ್ವ ಕಾರ್ಡಿಯೋ ಮೈಯೋಪತಿ ಕಾಯಿಲೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಹೃದಯ ಕಸಿ ಮಾಡಲಾಗಿದೆ. ಎಂ.ಎಸ್​ ರಾಮಯ್ಯ ಆಸ್ಪತ್ರೆಯ ಇತಿಹಾಸದಲ್ಲಿ‌ ಇದು 20ನೇ ಹೃದಯ‌ ಕಸಿ ಆಗಿದೆ.

ವರದಿ – ಹೋಮೇಶ್,ಮಣಗಲಿ.

Leave a Reply

Your email address will not be published. Required fields are marked *