ವೇಗ ಹೆಚ್ಚಿಸುವ ಕೆ.ಎಸ್. ಆರ್.ಟಿ. ಸಿ ಬಸ್ : ಸಾರ್ವಜನಿಕರಿಗೆ ಜೀವ ಭಯ,

ಬೆಂಗಳೂರಿನಿಂದ ಶನಿವಾರಸಂತೆಗೆ ದಿನ ನಿತ್ಯ ಹಲವಾರು ಕೆ. ಎಸ್. ಆರ್. ಟಿ. ಸಿ ಬಸ್ಸುಗಳು ಸಂಚರಿಸುತ್ತವೆ.ವಿಪರ್ಯಾಸ ಎಂದರೆ ಹೈವೇಗಳಲ್ಲಿ ಸಂಚರಿಸುವ ರೀತಿ ಗ್ರಾಮೀಣ ಭಾಗಗಳಲ್ಲಿಯೂ ವೇಗ ಮಿತಿಯಿಲ್ಲದೇ ಸಂಚರಿಸುತ್ತವೆ.ಕೊಡಗಿನಲ್ಲಿ ಸುರಿಯುತ್ತಿರುವ ಭಾರಿ ಮಳೆ ಒಂದು ಕಡೆಯಾದರೆ ಜಿಲ್ಲೆಯಾದ್ಯಂತ ಕಿರಿದಾದ ರಸ್ತೇಗಳಿದ್ದು ವಾಹನ ಸಂಚಾರಕ್ಕೆ ತೊಂದರೆ ಆಗುವುದರ ಜೊತೆಗೇ ಟೆಲಿಫೋನ್ ಕಂಪೆನಿಗಳ ಕೇಬಲ್ ಅಳವಡಿಕೆಯ ಗುಂಡಿಗಳು ಅಪಾಯದ ಮುನ್ಸೂಚನೆ ನೀಡುತ್ತೀವೆ ಹೀಗಿರುವಾಗ ಕೆ .ಎಸ್ ಅರ್.ಟಿ. ಸಿ ಚಾಲಕರು ಓವರ್ ಟೆಕ್ ಮಾಡುವ ಮೂಲಕ ಎದುರು ವಾಹನ ಸವಾರರಿಗೆ ಜೀವ ಭಯ ಹುಟ್ಟಿಸುತ್ತಾರೆ.ಇಂತಹ ಓವರ್ ಟೆಕ್ ನ ಘಟನೆ ಇಂದು ಬೆಳಿಗ್ಗೇ ಹಂಡ್ಲಿ ಹತ್ತಿರ ನೇಡೇದಿದ್ದು ನಮ್ಮ ಕ್ಯಾಮೆರಾ ಕಣ್ಣಿಗೆ ಸಿಕ್ಕಿದೆ..ದಯಮಾಡಿ ಇನ್ನಾದರೂ ಕೆ. ಎಸ್. ಆರ್. ಟಿ.ಸಿ ಚಾಲಕರು ಗ್ರಾಮೀಣ ಭಾಗದಲ್ಲಿ ನಿಧಾನಗತಿಯ ಚಾಲನೆ ಮಾಡಲಿ ಎನ್ನುವುದೇ ಕಾವೇರಿ ನ್ಯೂಸ್ ನ ಕಳಕಳಿಯ ಮನವಿ….

ವರದಿ – ಹೋಮೇಶ್,ಮಣಗಲಿ.

Leave a Reply

Your email address will not be published. Required fields are marked *