ಕರ್ನಾಟಕದ ಊಟಿ ಮಲೆನಾಡಿನ ಸ್ವರ್ಗ ಸಕಲೇಶಪುರ

💐 ಕಾವೇರಿ ನ್ಯೂಸ್ 💐
#ಕರ್ನಾಟಕದ #ಊಟಿ #ಸಕಲೇಶಪುರ

ಸಕಲೇಶಪುರವು ಕರ್ನಾಟಕದ #ಹಾಸನ ಜಿಲ್ಲೆಯ ಒಂದು ಗಿರಿಧಾಮ ಪಟ್ಟಣ.

ತಮಿಳಿನಾಡಿನ ಊಟಿ ನೋಡಲು ಹೋಗಬೇಕೆನ್ನುವವರು ಕರ್ನಾಟಕದ ಊಟಿಗೆ ಭೇಟಿ ನೀಡಿದ್ದೀರಾ? ಬೆಂಗಳೂರಿನಿಂದ ಮಂಗಳೂರು ಅಥವಾ ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳಕ್ಕೆ ಹೋಗುವಾಗ ನಿಮಗೆ ಸಕಲೇಶಪುರ ಸಿಗುತ್ತದೆ.

ಬಡವರ ಊಟಿಯೆಂದೇ ಈ ಜಾಗ ಫೇಮಸ್. ವೀಕೆಂಡ್ ನಲ್ಲಿ ಚಿಕ್ಕ ಟ್ರಿಪ್ ಹೋಗಿ ರಿಲ್ಯಾಕ್ಸ್ ಆಗಿ ಬರಬೇಕೆಂದು ಬಯಸುವುದಾದರೆ ಇದು ಬೆಸ್ಟ್ ಜಾಗ. ಅದರಲ್ಲೂ ಟ್ರಕ್ಕಿಂಗ್ ಪ್ರಿಯರಿಗಂತೂ ಈ ಸ್ಥಳ ತುಂಬಾನೇ ಇಷ್ಟವಾಗುವುದು.

ಇಲ್ಲಿಯ ದೇವಾಲಯ #ಹೊಯ್ಸಳರ ಕಾಲವನ್ನು ನೆನಪಿಸುತ್ತದೆ. ಇನ್ನು ಇಲ್ಲಿಗೆ #ಮಳೆಗಾಲದ ಸಮಯದಲ್ಲಿ ಹೋದರೆ ಮಂಜೆಹಳ್ಳಿ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

ಟಿಪ್ಪು ನಿರ್ಮಿಸಿರುವ ನಕ್ಷತ್ರಾಕಾರದ #ಮಂಜರಾಬಾದ್ ಕೋಟೆ ಇಲ್ಲಿಯ ಮತ್ತೊಂದು ಪ್ರಮುಖ ಆಕರ್ಷಣೆ.
ಇಲ್ಲಿ ಪ್ರವಾಸಿಗರಿಗೆ ಅತ್ಯಂತ ಪ್ರಮುಖ ಆಕರ್ಷಣೆಯೆಂದರೆ ಜೇನುಕಲ್ಲು ಗುಡ್ಡ ಹಾಗೂ #ರೈಲು_ಮಾರ್ಗ.

ಹಸಿರನ್ನು ಕಣ್ತುಂಬಿಕೊಳ್ಳುತ್ತಾ ಮಾಡುವ ಟ್ರಕ್ಕಿಂಗ್ ನಿಮಗೊಂದು ಹೊಸ ಅನುಭವ ನೀಡುವುದು. ಇನ್ನು ಅಲ್ಲಿಯ ಇತರ ಸ್ಥಳಗಳನ್ನು ಸುತ್ತಾಡಿಕೊಂಡು ಬರಬೇಕೆಂದು ಬಯಸುವುದಾದರೆ ಬಾಡಿಗೆ ಜೀಪ್ ಗಳಿವೆ.

ವರದಿ – ಹೋಮೇಶ್,ಮಣಗಲಿ.

Leave a Reply

Your email address will not be published. Required fields are marked *