ನೌಕಾಪಡೆಯ ರಿಯರ್ ಅಡ್ಮಿರಲ್ ಆಗಿ ಕೊಡಗಿನ ಬಿ. ಉತ್ತಯ್ಯ ಆಯ್ಕೆ

ಕೊಡಗಿನ ವೀರ ಐಚ್ಚೆಟ್ಟಿರ ಬಿ.ಉತ್ತಯ್ಯ ಭಾರತೀಯ ನೌಕಾಪಡೆಯ ರಿಯರ್‌ ಅಡ್ಮಿರಲ್‌ ಆಗಿ ನೇಮಕಗೊಂಡಿದ್ದಾರೆ.

ದೇಶಸೇವೆಗಾಗಿ ಕೊಡಗಿನ ಅನೇಕ ವೀರ ಸೇನಾನಿಗಳು ಇದಾಗಲೇ ಸೇನೆಗೆ ಸೇರ್ಪಡೆಗೊಂಡು ಸಾಹಸ ಮೆರೆದಿರುವುದು ನಾವೆಲ್ಲಾ ನೋಡಿದ್ದೇವೆ. ಇಂತಹಾ ವೀರಭೂಮಿಯ ಇನ್ನೋರ್ವ ಕುವರ ಇದೀಗ ಭಾರತೀಯ ನೌಕಾಪಡೆಯಲ್ಲಿ ಮೂರನೇ ಅತ್ಯುನ್ನತ ಹುದ್ದೆಗೇರುತ್ತಿರುವುದು ಕರ್ನಾಟಕದ ಜನತೆಗೆ ಇನ್ನಷ್ಟು ಹೆಮ್ಮೆ ಮೂಡಿಸಿದೆ. ಅಂದಹಾಗೆ ಉತ್ತಯ್ಯ ಈ ಸ್ಥಾನಕ್ಕೇರುತ್ತಿರುವ ಕೊಡಗು ಜಿಲ್ಲೆಯ ಪ್ರಥಮ ವ್ಯಕ್ತಿ ಎನ್ನುವುದು ಗಮನಾರ್ಹ.

ಕೊಡಗಿನ ಮಕ್ಕಂದೂರಿನವರಾದ ಉತ್ತಯ್ಯ ದಿ. ಬೆಳ್ಯಪ್ಪ ಅವರ ಪುತ್ರ. ರಿಯರ್‌ ಅಡ್ಮಿರಲ್‌ ಎನ್ನುವುದು ಭೂಸೇನೆಯಲ್ಲಿ ಮೇಜರ್‌ ಜನರಲ್‌ ಹುದ್ದೆಗೆ ಸರಿಸಮನಾದ ಹುದ್ದೆಯಾಗಿದೆ.
 1984 ರಲ್ಲಿ ಭಾರತೀಯ ನೌಕಾಪಡೆಗೆ ಸೇರಿದ್ದ ಉತ್ತಯ್ಯ ಬಿ.ಟೆಕ್‌, ಎಂ.ಟೆಕ್‌ ಹಾಗೂ ಎಂ.ಫಿಲ್‌ ಪದವೀಧರರು. ಇದಕ್ಕೂ ಮುನ್ನ ನೌಕಾಪಡೆಯಲ್ಲಿ ಕಮಾಡೋರ್‌ ಆಗಿ ಸೇವೆ ಸಲ್ಲಿಸಿದ್ದ ಇವರಿಗೆ ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ. ಉತ್ತಯ್ಯ ದೆಹಲಿಯಲ್ಲಿ ನೆಲೆಯಾಗಿದ್ದರೆ ಅವರ ಕುಟುಂಬ ಬೆಂಗಳೂರಿನಲ್ಲಿ

Leave a Reply

Your email address will not be published. Required fields are marked *