ದುಬಾರೆಯಲ್ಲಿ ಮತ್ತೆ ರ್ಯಾಫ್ಟಿಂಗ್ ಕ್ರೀಡೆ ಸ್ಥಗಿತ
ಕೊಡಗು: ಸಮೀಪದ ದುಬಾರೆ ಪ್ರವಾಸಿ ತಾಣದಲ್ಲಿ ಭಾನುವಾರದಿಂದ ಆರಂಭವಾಗಬೇಕಿದ್ದ ರ್ಯಾಫ್ಟಿಂಗ್ ಕ್ರೀಡೆ ಬೋಟ್ ಮಾಲೀಕರ ಮಧ್ಯೆ ಹುಟ್ಟಿಕೊಂಡ ಗೊಂದಲದಿಂದ ಮತ್ತೆ ಸ್ಥಗಿತಗೊಂಡಿದೆ.
ಶನಿವಾರ ದುಬಾರೆಯಲ್ಲಿ ಸಭೆ ಸೇರಿದ್ದ ರ್ಯಾಫ್ಟಿಂಗ್ ಅಸೋಸಿಯೇಷನ್ ಪದಾಧಿಕಾರಿಗಳು ಜಿಲ್ಲಾಧಿಕಾರಿ ಸೂಚನೆಯಂತೆ ಕಾನೂನುಬದ್ಧವಾಗಿ ರ್ಯಾಫ್ಟಿಂಗ್ ನಡೆಸಲು ಒಪ್ಪಿಕೊಂಡಿದ್ದರು. ದುಬಾರೆ ಕೇಂದ್ರೀಕೃತವಾಗಿ 7 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮಾತ್ರ ಕ್ರೀಡೆ ನಡೆಸಲು ಒಪ್ಪಿಕೊಂಡಿದ್ದರು.
ಆದರೆ ನಂತರ ಸಂಜೆ ವೇಳೆಗೆ ನಡೆದ ಬೆಳವಣಿಗೆಯಲ್ಲಿ ಕೆಲ ರ್ಯಾಫ್ಟಿಂಗ್ ಬೋಟ್ ಮಾಲೀಕರು ದುಬಾರೆ ಬಿಟ್ಟು ಬೇರೆ ಕಡೆಯಲ್ಲೂ ಕಾವೇರಿ ನದಿಯಲ್ಲಿ ರ್ಯಾಫ್ಟಿಂಗ್ ನಡೆಸುವ ಬಗ್ಗೆ ಮಾತನಾಡಿ ಗೊಂದಲ ಎಬ್ಬಿಸಿದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಧಿಕೃತ ಪರವಾನಗಿ ಕೊಡುವತನಕ ರ್ಯಾಫ್ಟಿಂಗ್ ಆರಂಭಿಸದಿರಲು ಅಸೋಸಿಯೇಷನ್ ಪ್ರಮುಖರು ತೀರ್ಮಾನ ತೆಗೆದುಕೊಂಡಿದ್ದಾರೆ.