ದೇಶಪ್ರೇಮ ಮೆರೆದ ಕೆ.ಎಸ್. ಆರ್.ಟಿ. ಸಿ. ಬಸ್ ಸಿಬ್ಬಂದಿ

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬೇಲೂರು ಘಟಕದ KA-18-F-931 ನಂಬರಿನ ಚಿಕ್ಕಮಗಳೂರು- ಬೆಂಗಳೂರು ಮಾರ್ಗವಾಗಿ‌ ಓಡಾಡುವ ಕೆ.ಎಸ್.ಆರ್.ಟಿ.ಸಿ ಬಸ್ಸ್ ನಲ್ಲಿ ಕಂಡು ಬಂದ ವಿಶ್ವಕಂಡ ಮೂರು ಮಹಾನ್ ಚೇತನರ ಪೋಟೋ. ಇದು ಇಷ್ಟೇ ಅಲ್ಲ ಈ ಬಸ್ಸಿನಲ್ಲಿ‌ ಪ್ರಯಾಣಿಕರಿಗೆ ಪ್ರಯಾಣ ಆಯಾಸ ಆಗದಂತೆ ಮನರಂಜನೆ ಯಿಂದ ಕೂಡಿರಲೆಂದು ಆಡಿಯೋ ವ್ಯವಸ್ಥೆ ಅದರಲ್ಲಿ ಕಿವಿಗೆ ಇಂಪು ನೀಡು ಅರ್ಥಗರ್ಭಿತ ಹಾಡುಗಳು, ಹಾಗೆಯೇ ಬಸ್ಸಿನಲ್ಲಿ ಸ್ವಚ್ಚತೆಗೂ ಸಹ ಅಷ್ಟೇ ಪ್ರಾಮುಖ್ಯತೆಯನ್ನು ಕೊಡಲಾಗಿದೆ. ನನಗಂತೂ‌ ಬೇಲೂರಿನಿಂದ ಚಿಕ್ಕಮಗಳೂರು ವರೆಗಿನ ಪ್ರಯಾಣ ತುಂಬಾ ಖುಷಿ ಹಾಗೂ ಮನರಂಜನೆಯನ್ನು ನೀಡಿತು. ಸಾಧ್ಯವಾದರೆ ಮುಂದಿನ ತಿಂಗಳು ಬೆಂಗಳೂರು ಹೋಗುವಾಗ ಇದೇ ಬಸ್ಸಿನಲ್ಲಿ ಬೆಂಗಳೂರು ತನಕ ಪ್ರಯಾಣ ಮಾಡುವ ಅಲೋಚನೆ ಮಾಡುತ್ತಿದ್ದೇನೆ.
ಜೊತೆಗೆ ಸಿಬ್ಬಂದಿಗಳು ಪ್ರಯಾಣಿಕರೊಂದಿಗೆ ಆತ್ಮೀಯವಾಗಿ‌ ನಡೆದು ಕೊಂಡ ರೀತಿ ನನಗೆ ಆಶ್ಚರ್ಯವಾಯಿತು ಮತ್ತು ಎಲ್ಲಾ ಬಸ್ಸಿನ್ನಲ್ಲೂ ಈ ರೀತಿ ಇರುವುದಿಲ್ಲವಲ್ಲ ಎಂಬಾ ನೋವು ಆಯಿತು.

ಈ ಬಸ್ಸಿನ ಚಾಲಕರಾದ ರವಿ‌ (ಮಲ್ಲ ಪಟ್ಟಣ) ಹಾಗೂ ನಿರ್ವಾಹಕರಿಗೂ (ಹೆಸರು ತಿಳಿದಿಲ್ಲ) ಹೃದಯಪೂರ್ವಕ ಭೀಮ ಧನ್ಯವಾದಗಳು..
ಇದೇ ರೀತಿಯಲ್ಲಿ ಎಲ್ಲಾ ಬಸ್ಸುಗಳ ಚಾಲಕ ನಿರ್ವಾಹಕರು ತಮ್ಮ ಜವಾಬ್ದಾರಿ ಅರಿತು ಸ್ವಚ್ಚತೆ, ಮನರಂಜನೆ ನೀಡಿ‌ ಪ್ರಯಾಣಿಕರಿಗೆ ಸಾಧ್ಯವಾದಷ್ಟು ಉತ್ತಮ ಸೇವೆ ಯನ್ನು ನೀಡಿದರೆ ಖಾಸಗಿ ಬಸ್ಸುಗಳನ್ನು ಜನರು ಅವಲಂಭಿಸುವ ಪ್ರಮಾಣ ಕಡಿಮೆ ಆಗಬಹುದು.

ವರದಿ – ಹೋಮೇಶ್,ಮಣಗಲಿ.

Leave a Reply

Your email address will not be published. Required fields are marked *