ರೈತರ ಮನೆ ಬಾಗಿಲಿಗೆ ಅಂಚೆ ಮೂಲಕ ಬರಲಿದೆ ಜಮೀನಿನ ಪಹಣಿ

ರಾಜ್ಯದ ರೈತರ ಮನೆ ಬಾಗಿಲಿಗೆ ಅಂಚೆ ಮೂಲಕ ಪಹಣಿ ಪತ್ರ ಕಳಿಸುವ ನೂತನ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೆ ಬರಲಿದೆ. ಆನ್​ಲೈನ್ ಮೂಲಕ ಅಥವಾ ನೇರವಾಗಿ ತಹಸೀಲ್ದಾರ್ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿದ ರೈತರು ಪಹಣಿ ಪತ್ರದ ಶುಲ್ಕದ ಜತೆ ಅಂಚೆ ವೆಚ್ಚ ಪಾವತಿಸಿದರೆ ಅಧಿಕೃತ ವಿಳಾಸಕ್ಕೆ ತಲುಪಲಿದೆ.

ಇಂಥದ್ದೊಂದು ವಿನೂತನ ಯೋಜನೆ ಜಾರಿಗೊಳಿಸಲು ಕಂದಾಯ ಇಲಾಖೆಯ ಭೂಮಿ ವಿಭಾಗ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮುಂದಿನ ಸಚಿವ ಸಂಪುಟದಲ್ಲಿ ಅನುಮೋದನೆ ಸಿಗುವ ನಿರೀಕ್ಷೆ ಇದೆ. ಅಂಚೆ ಮೂಲಕ ಪಹಣಿ ಪತ್ರ ತಲುಪಿಸುವ ವ್ಯವಸ್ಥೆ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಪರಿಚಯಿಸಲಾಗುತ್ತಿದೆ. ರೈತರು ಮ್ಯುಟೇಷನ್ ಆಧರಿತ ಪಹಣಿ ಪತ್ರ ಬೇಕೆಂದು ಸಲ್ಲಿಸುವ ಅರ್ಜಿ ಜತೆ ಅಂಚೆ ವೆಚ್ಚ ಪಾವತಿಸಿದರೆ ಪಹಣಿ ಪತ್ರದಲ್ಲಿ ದಾಖಲಾದ ವಿಳಾಸ ಆಧರಿಸಿ ಪಹಣಿ ಮನೆಗೇ ತಲುಪಲಿದೆ. ಪಹಣಿ ಪತ್ರದ ವೆಚ್ಚ 15 ರೂ. ಹಾಗೂ ಸಾಮಾನ್ಯ ಅಂಚೆ ವೆಚ್ಚ 10 ಸೇರಿ 25 ರೂ. ಪಾವತಿಸಿದರೆ ಸಾಮಾನ್ಯ ಅಂಚೆ ಮೂಲಕ ಪಹಣಿ ತಲುಪುತ್ತದೆ. ಇನ್ನು ಪಹಣಿ ಪತ್ರದ ಶುಲ್ಕ 15 ರೂ. ಜತೆಗೆ ರಿಜಿಸ್ಟರ್ಡ್ ಅಂಚೆ ವೆಚ್ಚ 20 ರೂ. ಸೇರಿ ಒಟ್ಟು 35 ರೂ. ಪಾವತಿಸಿದರೆ ರಿಜಿಸ್ಟರ್ಡ್ ಅಂಚೆ ಮೂಲಕ ಪಹಣಿ ಪಡೆಯಬಹುದು.

ವರದಿ – ಹೋಮೇಶ್,ಮಣಗಲಿ.

Leave a Reply

Your email address will not be published. Required fields are marked *