ಸ್ವಾತಂತ್ರ್ಯ ಸಂಭ್ರಮಕ್ಕೆ ಬಿಎಸ್‌ಎನ್‌ಎಲ್‌ ಬಿಗ್ ಕೊಡುಗೆ..! ಟಾರ್ಗೇಟ್ ಜಿಯೋ..!

ಭಾರತದ ಟೆಲಿಕಾಂ ಜಗತ್ತಿಗೆ ಜಿಯೋ ಪ್ರವೇಶಿಸಿದ ನಂತರ ಟೆಲಿಕಾಂ ಲೋಕದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಅತಿ ಹೆಚ್ಚು ಡೇಟಾ ಬಳಸುವ ನಂ.1 ಟೆಲಿಕಾಂ ಆಪರೇಟರ್‌ ಆಗಿ ಜಿಯೋ ಮುಂದುವರೆಯುತ್ತಿದೆ. ಇತರೆ ಟೆಲಿಕಾಂ ಆಪರೇಟರ್‌ಗಳು ಜಿಯೋ ಮಣಿಸಲು ರಣತಂತ್ರಗಳನ್ನು ಎಣೆಯುತ್ತಿವೆ. ಅದರಂತೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಹೊಸ ಗ್ರಾಹಕರನ್ನು ಸೆಳೆಯಲು ಪ್ಲಾನ್‌ ಘೋಷಿಸಿದ್ದು, ಜಿಯೋ ಸೇರಿ ಇತರ ಟೆಲಿಕಾಂ ಆಪರೇಟರ್‌ಗಳ ನಿದ್ದೆಗೆಡಿಸಿದೆ.

ಹೌದು, ಈ ಸಲ ಸ್ವಾತಂತ್ರ್ಯ ಸಂಭ್ರಮವನ್ನು ಇನ್ನಷ್ಟು ಉತ್ತೇಜಿಸಲು ಅತಿ ಕಡಿಮೆ ದರದಲ್ಲಿ ಬಿಎಸ್‌ಎನ್‌ಎಲ್ ಹೊಸ ಪ್ಲಾನ್‌ಗಳನ್ನು ಘೋಷಿಸಿದ್ದು, ಗ್ರಾಹಕರನ್ನು ಸೆಳೆಯುವ ತವಕ ಹೊಂದಿದೆ. ಈ ಪ್ಲಾನ್ ಮೂಲಕ ಜಿಯೋ, ಏರ್‌ಟೆಲ್, ವೊಡಾಫೋನ್‌ಗಳ ಕೆಲವು ಪ್ಲಾನ್‌ಗಳನ್ನು ಹಿಂದಾಕಿದೆ. ₹ 29 ಮತ್ತು ₹9 ಪ್ಲಾನ್‌ಗಳನ್ನು ತಂದಿದ್ದು, ಮಧ್ಯಮ ವರ್ಗದ ಗ್ರಾಹಕರನ್ನು ಟಾರ್ಗೇಟ್‌ ಮಾಡಿದೆ. ಈ ಪ್ಲಾನ್‌ಗಳಲ್ಲಿ ಗ್ರಾಹಕರು ಬೇರೆ ಎಲ್ಲಾ ಆಪರೇಟರ್‌ ಪ್ಲಾನ್‌ಗಳಿಗಿಂತಲೂ ಹೆಚ್ಚಿನದನ್ನೆ ಪಡೆಯುತ್ತಾರೆ.

ಬಿಎಸ್‌ಎನ್‌ಎಲ್ ಲಾಂಚ್ ಮಾಡಿರುವ ₹ 29 ಪ್ಲಾನ್‌ನಲ್ಲಿ ಗ್ರಾಹಕರು ಅನಿಯಮಿತ ಉಚಿತ ಕರೆಗಳನ್ನು ಮತ್ತು ಅನಿಯಮಿತ ಡೇಟಾವನ್ನು ಪಡೆಯಲಿದ್ದಾರೆ. ಅದಲ್ಲದೇ ಪ್ರತಿದಿನ 100 ಉಚಿತ SMS ಪಡೆಯಲಿದ್ದು, ವ್ಯಾಲಿಡಿಟಿ 7 ದಿನಗಳಾಗಿದೆ. ದೆಹಲಿ ಮತ್ತು ಮುಂಬೈ ನಗರಗಳ ಗ್ರಾಹಕರಿಗೆ ವಾಯ್ಸ್ ಕರೆಗಳಲ್ಲಿ ವ್ಯತ್ಯಾಸವಿದೆ. ಈ ಪ್ಲಾನ್‌ನಲ್ಲಿ ದಿನಕ್ಕೆ ಕನಿಷ್ಟ FUP 2GB ಡೇಟಾ ಇದ್ದು, ನಂತರ ಇಂಟರ್‌ನೆಟ್‌ ವೇಗ 80Kbpsಗೆ ಇಳಿಯಲಿದೆ. ಅಲ್ಲದೇ ಉಚಿತ Personalised Ringback Tone ಅವಕಾಶವನ್ನು ಬಿಎಸ್‌ಎನ್‌ಎಲ್‌ ನೀಡಿದೆ.

₹ 9 ಪ್ಲಾನ್‌ನಲ್ಲಿ ಬಿಎಸ್‌ಎನ್‌ಎಲ್ ಗ್ರಾಹಕರು ಅನಿಯಮಿತ ಉಚಿತ ಕರೆಗಳನ್ನು ಮತ್ತು ಅನಿಯಮಿತ ಡೇಟಾವನ್ನು ಪಡೆಯಲಿದ್ದಾರೆ. ಅದಲ್ಲದೇ ಪ್ರತಿದಿನ 100 ಉಚಿತ SMS ಪಡೆಯಲಿದ್ದು, ದೆಹಲಿ ಮತ್ತು ಮುಂಬೈ ನಗರಗಳ ಗ್ರಾಹಕರಿಗೆ ವಾಯ್ಸ್ ಕರೆಗಳಲ್ಲಿ ವ್ಯತ್ಯಾಸವಿದೆ. ವ್ಯಾಲಿಡಿಟಿ ಒಂದು ದಿನ. ಈ ಪ್ಲಾನ್‌ನಲ್ಲಿಯೂ ದಿನಕ್ಕೆ ಕನಿಷ್ಟ FUP 2GB ಡೇಟಾ ಇದ್ದು, ನಂತರ ಡೇಟಾ ವೇಗ 80Kbpsಗೆ ಇಳಿಯಲಿದೆ.

ಈ ಎರಡು ಆಫರ್‌ಗಳನ್ನು ಬಿಎಸ್‌ಎನ್‌ಎಲ್‌ ಸ್ವಾತಂತ್ರ್ಯ ಸಂಭ್ರಮವನ್ನು ಹೆಚ್ಚಿಸಲು ನೀಡಿದ್ದು, ಆಗಸ್ಟ್‌ 10 ರಿಂದ 25ರವರೆಗೆ ಮಾತ್ರ ಲಭ್ಯವಿರಲಿದೆ. ನಂತರ ಡೇಟಾ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಅವಧಿ ಮುಗಿದ ನಂತರ ₹ 29 ಪ್ಲಾನ್‌ನಲ್ಲಿ ಗ್ರಾಹಕರು ವಾರದ ವ್ಯಾಲಿಡಿಟಿಯಲ್ಲಿ 1GB ಡೇಟಾ ಹಾಗೂ 300 ಉಚಿತ SMSಗಳನ್ನು ಪಡೆಯಲಿದ್ದಾರೆ. ₹9 ಪ್ಲಾನ್‌ನಲ್ಲಿ ಡೇಟಾ ಪ್ರಮಾಣವನ್ನು ಇಳಿಸುವ ಸಾಧ್ಯತೆ ಹೆಚ್ಚಿದೆ. 15 ದಿನದ ಆಫರ್‌ನ್ನು ಹೆಚ್ಚು ಸ್ವಾತಂತ್ರ್ಯದಿಂದಲೇ ಎಂಜಾಯ್ ಮಾಡಿ.

ವರದಿ – ಹೋಮೇಶ್,ಮಣಗಲಿ.

Leave a Reply

Your email address will not be published. Required fields are marked *