ಕೊಡಗಿನಲ್ಲಿ ಮಳೆರಾಯನ ಅಬ್ಬರ : ಜನಜೀವನ ಅಸ್ತವ್ಯಸ್ತ.

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆಯಾಗು ತ್ತಿದ್ದು, 20 ವರ್ಷಗಳಲ್ಲಿ ಗರಿಷ್ಠ ಎನ್ನಲಾಗಿದೆ. ಪ್ರಸ್ತುತ ಮಳೆಯ ಬಿರುಸು ತಗ್ಗಿದ್ದರೂ ಹಾನಿ ಪ್ರಮಾಣ ಹೆಚ್ಚುತ್ತಲೇ ಇದೆ. ತಗ್ಗು ಪ್ರದೇಶಗಳಲ್ಲಿರುವ ಮನೆಗಳ ಒಳಗೆ ನೆಲದಡಿಯಿಂದ ನೀರು ಜಿನುಗುತ್ತಿದೆ. ಕೊಡಗು ಇಷ್ಟು ಪ್ರಮಾಣದ ಮಳೆಯನ್ನು ತಡೆದುಕೊಳ್ಳುವ ಶಕ್ತಿ ಕಳೆದುಕೊಂಡಿದೆ. ಕಳೆದ ವರ್ಷ ಬರಗಾಲ ಎದುರಿಸಿದ್ದ ಜಿಲ್ಲೆ ಈ ವರ್ಷ ಅತಿವೃಷ್ಟಿಯಿಂದ ನಲುಗಿದೆ. ಅಂತರ್ಜಲ ಮಟ್ಟ ಹೆಚ್ಚಾಗಿ ಗ್ರಾಮೀಣ ಭಾಗದ ಬೆಟ ಗುಡ್ಡಗಳ ಮೇಲಿನ ಮತ್ತು ತಗ್ಗು ಪ್ರದೇಶದ ನಿವಾಸಿಗಳು ಆತಂಕ ಎದುರಿಸುದ್ದಾರೆ. ಅನೇಕ ಮನೆಗಳು ಬಿರುಕು ಬಿಟ್ಟಿದ್ದರೆ ಕೆಲವು ಮನೆಗಳ
ಗೋಡೆಗಳು ಬಿದ್ದಿವೆ.

ಮಡಿಕೇರಿ ನಗರ ವ್ಯಾಪ್ತಿಯಲ್ಲಿ ದಟ್ಟ ಮಂಜು ಮುಸುಕಿದ ವಾತಾವರಣವಿದ್ದು, ಶೀತ ಗಾಳಿ ಬೀಸುತ್ತಿದೆ. ಅತಿಯಾದ ಚಳಿಯಿಂದ ಜನ ಕಂಗೆಟ್ಟಿದ್ದಾರೆ. ನಗರದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಚಾಲನೆ ಅಪಾಯಕಾರಿಯಾಗಿದೆ. ಮಂಜಿನ ವಾತಾವರಣವೂ ಅಪಾಯವನ್ನು ತಂದೊಡ್ಡುತ್ತಿದೆ.

ವರದಿ – ಹೋಮೇಶ್,ಮಣಗಲಿ.

Leave a Reply

Your email address will not be published. Required fields are marked *