ಸೆಪ್ಟೆಂಬರ್‌ 25ರಿಂದ ಆಯುಷ್ಮಾನ್‌ ಭಾರತ್‌ ಆರೋಗ್ಯ ಕವಚ

🌹 ಕಾವೇರಿ ನ್ಯೂಸ್ 🌹: ದೆಹಲಿ: ದೇಶದ 50 ಕೋಟಿ ಮಂದಿಗೆ ಅನುಕೂಲವಾಗುವ, ಜಗತ್ತಿನ ಅತೀ ದೊಡ್ಡ ಆರೋಗ್ಯ ರಕ್ಷಾ ಯೋಜನೆಯನ್ನು ಸೆಪ್ಟೆಂಬರ್‌ 25ರಿಂದ ಆರಂಭಿಸಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಘೋಷಿಸಿದ್ದಾರೆ.
ಕೆಂಪು ಕೋಟೆ ಆವರಣದಲ್ಲಿ ಸ್ವತಂತ್ರೋತ್ಸವದ ಪ್ರಯುಕ್ತ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ, ಪಂಡಿತ್‌ ದೀನ್‌ ದಯಾಳು ಉಪಾಧ್ಯಾಯರ ಜನ್ಮ ದಿನದ ಪ್ರಯುಕ್ತ ಪ್ರಧಾನ ಮಂತ್ರಿ ಜನ ಆರೋಗ್ಯ ಅಭಿಯಾನವನ್ನು ಆರಂಭಿಸಲಾಗುವುದು ಎಂದಿದ್ದಾರೆ.
“ಆರೋಗ್ಯ ಸೇವಾ ಅಭಿಯಾನಗಳ ಮೂಲಕ ದೇಶದ 50 ಕೋಟಿ ಮಂದಿ ಮೇಲೆ ಸಕರಾತ್ಮಕ ಪ್ರಭಾವ ಬೀರಲಿದೆ. ಆರೋಗ್ಯ ಸೇವೆಗಳನ್ನು ದೇಶದ ಬಡಜನತೆಯ ಕೈಗೆಟುಕುವಂತೆ ಮಾಡುವುದು ಮಹತ್ವವಾಗಿದೆ” ಎಂದು ಮೋದಿ ತಿಳಿಸಿದ್ದಾರೆ.
ಆಯುಷ್ಮಾನ್‌-ಭಾರತ ರಾಷ್ಟ್ರೀಯ ಆರೋಗ್ಯ ರಕ್ಷಣಾ ಮಿಶನ್‌ ಹೆಸರಿನ ಈ ಯೋಜನೆಯಲ್ಲಿ ಕುಟುಂಬವೊಂದಕ್ಕೆ ವಾರ್ಷಿಕ ಐದು ಲಕ್ಷ ರುಗಳಷ್ಟು ಆರೋಗ್ಯ ಸೇವಾ ವೆಚ್ಚವನ್ನು ಸರಕಾರ ಭರಿಸಲಿದೆ. ಈ ಮೂಲಕ ಹತ್ತು ಕೋಟಿಗೂ ಅಧಿಕ ಕುಟುಂಬಗಳಿಗೆ ಕೇಂದ್ರ ಸರಕಾರ ನೆರವಾಗಲಿದೆ.
ಗ್ರಾಮೀಣ ಪ್ರದೇಶದ 8.03 ಕೋಟಿ ಕುಟುಂಬಗಳು ಹಾಗು ನಗರ ಪ್ರದೇಶದ 2.33 ಕೋಟಿ ಕುಟುಂಬಗಳಿಗೆ ಆಯುಷ್ಮಾನ್‌ ಯೋಜನೆ ತಲುಪುವ ಗುರಿಯಿದೆ.

Leave a Reply

Your email address will not be published. Required fields are marked *