ಕೂದಲು ಸ್ಟ್ರೇಟ್ನಿಂಗ್​ ಮಾಡಿಸಿಕೊಂಡ ಯುವತಿ ಖಿನ್ನತೆಗೊಳಗಾಗಿ ಆತ್ಮಹತ್ಯೆ …

ಮಡಿಕೇರಿ: ಕೂದಲು ಸ್ಟ್ರೇಟ್ನಿಂಗ್​ ಮಾಡಿಸುವುದು, ಕಲರಿಂಗ್​ ಮಾಡಿಸುವುದು ಈಗಿನ ಟ್ರೆಂಡ್​. ಆದರೆ ಈಗ ಹೇರ್​ ಸ್ಟ್ರೇಟ್ನಿಂಗ್​ನಿಂದಾಗಿ ಯುವತಿಯೊಬ್ಬಳು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಮಡಿಕೇರಿಯ ನೇಹಾ ಗಂಗಮ್ಮ(19) ಚಂದನೆಯ ಹುಡುಗಿ. ವಿರಾಜಪೇಟೆ ತಾಲೂಕಿನ ಕೊಟ್ಟಗೇರಿ ಗ್ರಾಮದ ಈಕೆ ಮೈಸೂರಿನ ಜಯಲಕ್ಷ್ಮೀಪುರದಲ್ಲಿರುವ ರೋಹಿಣಿ ಬ್ಯೂಟಿ ಝೋನ್ ನಲ್ಲಿ ಹೇರ್​ ಸ್ಟ್ರೇಟ್​ ಮಾಡಿಸಿದ್ದರು. ಆದರೆ ಅದಾದ ಬಳಿಕ ಕೂದಲು ವಿಪರೀತ ಉದುರಲು ಪ್ರಾರಂಭಿಸಿತ್ತು. ತಲೆಯೆಲ್ಲ ಬೋಳಾಗಿ ಹೋಗಿತ್ತು. ಇದರಿಂದ ನೇಹಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ನಂತರ ಆ.28ರಂದು ನದಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.

ಮೊದಲು ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಆಕೆಯ ತಂದೆ ತಾಯಿ ಬ್ಯೂಟಿ ಪಾರ್ಲರ್​ ವಿರುದ್ಧ ಆರೋಪ ಮಾಡಿದ್ದಾರೆ. ತಮ್ಮ ಮಗಳಿಗೆ ಚಿಕ್ಕವಳಿಂದಲೂ ಕೂದಲು ಚನ್ನಾಗಿಯೇ ಇತ್ತು. ಈಗ ಸ್ಟ್ರೇಟ್ನಿಂಗ್​ ಮಾಡಿಸಿದ ಮೇಲೆ ಪೂರ್ತಿ ಉದುರಿ ಹೋಗಿ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಳಪೆ ಸಾಮಗ್ರಿಗಳನ್ನು ಬಳಸಿ ಸ್ಟ್ರೇಟ್ನಿಂಗ್​ ಮಾಡಿದ್ದಾರೆ ಎಂದಿದ್ದಾರೆ. ನಿಟ್ಟೂರು ಗ್ರಾಮದ ಲಕ್ಷ್ಮಣ ತೀರ್ಥದಲ್ಲಿ ನೇಹಾ ಶವ ಪತ್ತೆಯಾಗಿದೆ.

Leave a Reply

Your email address will not be published. Required fields are marked *