ಕೊಡ್ಲಿಪೇಟೆಯಲ್ಲಿ ಸಿರಿ ಗ್ರಾಮೋದ್ಯೋಗ ಮಳಿಗೆ ಉದ್ಘಾಟನೆ

ಕೊಡ್ಲಿಪೇಟೆಯ ಮಹಿಳಾ ಸಮಾಜದ ಕೃಷಿ ಯಂತ್ರಧಾರೆಯಲ್ಲಿ ಸಿರಿ ಮಳಿಗೆ ಉದ್ಘಾಟನೆ ನೆಡೆಯಿತು.ಈ ಮಳಿಗೆಯನ್ನು ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮಿಗಳು ಉದ್ಘಾಟಿಸಿದರು.ಸಿರಿ ಮಳಿಗೆಯಲ್ಲಿ ಗ್ರಾಮೀಣ ಮಹಿಳೆಯರು ತಯಾರಿಸಿದ ಗೃಹೋಪಯೋಗಿ ವಸ್ತುಗಳು ದೊರೆಯುವುದರ ಜೊತೆಗೆ ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶ ಸಿಕ್ಕಂತಾಗುತ್ತದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡ್ಲಿಪೇಟೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರೋಹಿಣಿ ಸುಬ್ರಮಣ್ಯರವರು ವಹಿಸಿದ್ದರು.ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವಿನ್ಸೆಂಟ್ ವಲಯದ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.ಸಿ.ಎಚ್. ಎಸ್. ಸಿ.ಯ ಪ್ರಭಂಧಕರಾದ ಸದಾಶಿವ ನಾಯಕ್ ಸ್ವಾಗತಿಸಿದರು.ವಲಯ ಮೇಲ್ವಿಚಾರಕರಾದ ಸುಬ್ರಮಣ್ಯರವರು ವಹಿಸಿದ್ದರು.

ವರದಿ – ಹೋಮೇಶ್,ಮಣಗಲಿ.

Leave a Reply

Your email address will not be published. Required fields are marked *