ಕೊಡಗಿನ ದಕ್ಷ ಜಿಲ್ಲಾಧಿಕಾರಿ ಶ್ರೀ ವಿದ್ಯಾ ವರ್ಗಾವಣೆಗೆ ನೆಡೆದಿದೆಯಾ ತೆರೆ ಮರೆ ಕಸರತ್ತು…..????

ಕೊಡಗಿನ ಜಿಲ್ಲಾಧಿಕಾರಿಗಳು ಶ್ರೀಮತಿ ಶ್ರೀವಿಧ್ಯ ಅವರು ಮೂಲತ ಕೇರಳದವರು, ಅವರು ಕೊಡಗಿಗೆ ಸಿಕ್ಕ ಹಲವು ಪ್ರಾಮಾಣಿಕ ಜಿಲ್ಲಧಿಕಾರಿಗಳಲ್ಲಿ ಒಬ್ಬರು,

ಕೊಡಗು ಜಿಲ್ಲೆಯಲ್ಲಿ ಜಲಪ್ರಳಯ ಬಂದಾಗ ಅವರು ನಡೆಸಿದ ಕಾರ್ಯಗಳು ಒಂದಿಷ್ಟು ಅಲ್ಲ, ಜನಸೇವೆಗೆ ಸ್ವತ ಅವರೇ ಇಳಿದು ಬರಿಗಾಲಲ್ಲಿ ಬೆಟ್ಟ ಹತ್ತಿ ಜನರ ನೋವಿಗೆ ಸ್ಪಂದಿಸಿದರು,

ಕೊಡಗಿನಲ್ಲಿ ಇರುವ ಹಲವು ಮಾಫಿಯಗಳಿಗೆ ಅವರು ಫುಲ್ಲ್ ಸ್ಟಾಪ್ ಹಾಕಿದರು, ಇದರಿಂದ ಕೆರಳಿದ ಕೊಡಗಿನ ಪ್ರಮುಖ ಮಾಫಿಯಾಗಳು, ಮರ ಮಾಫಿಯ, ಮರಳು ಮಾಫಿಯ, ಕಲ್ಲು ಕ್ವೇರಿ ಮಾಫಿಯ, ಅವರನ್ನು ವರ್ಗಾಯಿಸಲು ಸರ್ಕಾರದ ಮನವಿ ಮಾಡಿಕೊಂಡಿದೆ ಅಂತೆ,

ಸರ್ಕಾರ ಮತ್ತು ನಮ್ಮ ರಾಜಕೀಯ ವ್ಯಕ್ತಿಗಳು ತಮ್ಮ ಲಾಭಕ್ಕ ಒಂದಾಗೊದಾದರೆ, ನಾವು ಪ್ರಜೆಗಳು ಯಾಕೆ ನಮ್ಮ ಜಿಲ್ಲಾಧಿಕಾರಿಗಳ ಪರ ನಿಲ್ಲಬಾರದು?

ನೋಡುವ ರಾಜಕೀಯ ನಡೆಯುತ್ತಾ? ಇಲ್ಲಾ ಪ್ರಜಾಕೀಯ ನಡೆಯುತ್ತಾ ಅಂತ!

ನೆನಪಿರಲಿ ಶ್ರೀಮತಿ ಶ್ರೀವಿಧ್ಯ ಅವರನು ವರ್ಗಾಯಿಸಿದರೆ ನಾವು ಪ್ರತಿಭಟಿಸಬೇಕಾಗುತ್ತೆ!

ಅವರಿಗೆ ಕೊಡಗಿನ ಇವತ್ತಿನ ಸ್ಥಿತಿ ಗೊತ್ತು ಅವರು ನಮ್ಮ ನಿರಾಶ್ರಿತರಿಗೆ ಉತ್ತಮ ಸೇವೆ ಕೊಡಬಹುದು, ಅದು ಬಿಟ್ಟು ಈ ಸಂಧರ್ಬದಲ್ಲಿ ಬೇರೆಯವರನ್ನು ಕರೆತಂದರೆ ನಮಗೆ ಕಷ್ಟವಾಗಬಹುದು! ಯೋಚನೆ ಮಾಡಿ ಜನರೇ!
ಕೊಡಗಿನ ಈಗಿನ ಶ್ರೀ ವಿದ್ಯಾ ಜಿಲ್ಲಾಧಿಕಾರಿಯನ್ನು ಬೇರೆ ವರ್ಗಾವಣೆ ಮಾಡಿದಾದಲ್ಲಿ ಕೊಡಗಿನ ಜನರು ಇವರ ದಕ್ಷತೆಗೆ ಮೆಚ್ಚಿಗೆಯನ್ನು ವ್ಯಕ್ತಪಡಿಸಿ ಕೊಂಡಿರುತ್ತಾರೆ ಇವರನ್ನು ಬೇರೆಡೆ ಎತ್ತಂಗಡಿ ಮಾಡಿದೆ ಆದಲ್ಲಿ ಕೊಡಗಿನ ಜನರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಇದು ಸರಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ..
ಕೊಡಗಿನ ಈಗಿನ ಜಿಲ್ಲಾಧಿಕಾರಿ ಅವರು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದರೆ. ಅವರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಅವರು ಕೊಡಗಿನಲ್ಲಿ ಇರಬೇಕು. ಅವರನ್ನು ವರ್ಗಾವಣೆ ಮಾಡಿದೆ ಆದರೆ ನಾವು ಕನಾ೯ಟಕ ರಕ್ಷಣಾ ವೇದಿಕೆ ಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರವೇ ಹೇಳಿದೆ.
ವರದಿ – ಹೋಮೇಶ್,ಮಣಗಲಿ.

Leave a Reply

Your email address will not be published. Required fields are marked *