ಪ್ರಕರಣ ಸಾಬೀತಾದರೆ ಆಸ್ತಿಯನ್ನು ಕೊಡಗು ಸಂತ್ರಸ್ತರಿಗೆ ನೀಡ್ತಿನಿ ಎಂದ ಬಿಜೆಪಿ ನಾಯಕ……

🌹 ಕಾವೇರಿ ನ್ಯೂಸ್ 🌹
ಸಿಎಂ ಕುಮಾರಸ್ವಾಮಿಯ ರಾಜ್ಯ ಸರ್ಕಾರವನ್ನು ಕೆಡುವಲು ನಾನು ಬಿಜೆಪಿ ಕೈಹಿಡಿದಿದ್ದೇನೆ ಎನ್ನುವ ಆರೋಪ ಸಾಬೀತಾದರೆ ನಾನು ನನ್ನ ಎಲ್ಲ ಆಸ್ತಿಯನ್ನು ಕೊಡಗು ಸಂತ್ರಸ್ತರಿಗೆ ನೀಡುತ್ತೇನೆ ಎಂದು ಜಿಮ್ ಸೋಮ ಅಲಿಯಾಸ್ ನಾರ್ವೆ ಸೋಮಶೇಖರ್ ಹೇಳಿದರು.

ಅರಸೀಕೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು CM ಕುಮಾರಸ್ವಾಮಿಯವರ ಬಳಿ ಎಲ್ಲಾ ಇಲಾಖೆಗಳಿವೆ, ಈ ಬಗ್ಗೆ ಅವರು ಸೂಕ್ತ ತನಿಖೆ ನಡೆಸಲಿ ಎಂದಿದ್ದಾರೆ ನಾನು ಅಕ್ರಮವಾಗಿ ಹಣ ಸಂಪಾದಿಸಿದ್ದರ ಬಗ್ಗೆ ದಾಖಲೆಗಳೊಟ್ಟಿಗೆ ಸಾಬೀತುಪಡಿಸಲಿ. ಅದು ನಿಜವೇ ಆಗಿದ್ದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಸುಖಾಸುಮ್ಮನೆ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ನಾನು ಯಾವುದೆ ಸರ್ಕಾರ ಬೀಳಿಸುವ ಯಾವುದೇ ಪ್ರಯತ್ನಕ್ಕೆ ನಾನು ಕೈ ಹಾಕುವುದು ಇಲ್ಲ, ಮುಂದೆಯೂ ಮಾಡಲ್ಲ ಕುಮಾರಸ್ವಾಮಿ ಹತ್ರ ಅಸಲಿ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ ಸೋಮು ಅವ್ರು ಇನ್ನೇನಾಗುತ್ತೊ ಕಾಯ್ದುನೋಡಬೇಕಿದೆಯಷ್ಟೆ

ಈಗಾಗಲೇ ಸಿಎಂ ಅವರಿಗೆ 48 ಗಂಟೆಗಳ ಕಾಲಾವಕಾಶವನ್ನು ನೀಡಿದ್ದೇನೆ. ಅವರು ಮಾಡಿರುವ ಆರೋಪ ಸಾಬೀತುಪಡಿಸದಿದ್ದರೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ಆರೋಪ ಸಾಬೀತಾದಲ್ಲಿ ನನ್ನ ಎಲ್ಲಾ ಆಸ್ತಿಯನ್ನು ಕೊಡಗು ಸಂತ್ರಸ್ತರಿಗೆ ನೀಡುತ್ತೇನೆ. ನನ್ನ ಈ ಮಾತಿಗೆ ನಾನು ಬದ್ಧನಾಗಿದ್ದೇನೆ ತಪ್ಪುವ ಮಾತೇ ಇಲ್ಲ ಎಂದು ತಿಳಿಸಿದ್ದಾರೆ. ಆಪರೇಷನ್ ಕಮಲದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ವರದಿ – ಹೋಮೇಶ್,ಮಣಗಲಿ.

Leave a Reply

Your email address will not be published. Required fields are marked *