ಹಾಸನ ಮುಕ್ತ ವಿವಿಗೆ ಮರು ಮಾನ್ಯತೆ

ಹಾಸನ: ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಮಾನ್ಯತೆ ಮರು ದೊರೆಯುತ್ತಿದ್ದಂತೆ ಬೆನ್ನಲೇ, ಹಾಸನ ಪ್ರಾದೇಶಿಕ ಕೇಂದ್ರದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಗರಿಗೆದರಿವೆ.

ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಪ್ರವೇಶ ಬಯಸಿ ನಗರದ ಹೊರವಲಯದ ಎಂ. ಕೃಷ್ಣ ಬಡಾವಣೆಯಲಿರುವ ಕೆ.ಎಸ್.ಓ.ಯು ಪ್ರದೇಶಿಕ ಕಚೇರಿಗೆ ಆಗಮಿಸುತ್ತಿದ್ದಾರೆ.

ಸರ್ಕಾರಿ/ಖಾಸಗಿ, ಸಾಮಾನ್ಯ ಕಾಲೇಜುಗಳು ಪದವಿ ಪ್ರವೇಶ ಪಡೆಯಲು ಸಾಧ್ಯವಾಗದ ಅಥವಾ ಉದ್ಯೋಗದಲ್ಲಿರುವ ಅಥವಾ ಇನ್ನಾಯಾವುದೇ ವೃತ್ತಿಯಲ್ಲಿದ್ದು ಪದವಿ ಸ್ನಾತಕೊತ್ತರ ಮಾಡುವ ಹಂಬಲ ಹೊಂದಿರುವ ಯುವಕರು ಕೇಂದ್ರದಲ್ಲಿ ಪ್ರವೇಶ ಬಯಸಿ ಬರುತ್ತಿದ್ದಾರೆ.

ಇದ್ದಲ್ಲದೆ ಈ ಬಾರಿ ಹಲವು ಹೊಸ ಕೋರ್ಸ್‍ಗಳು ಕೂಡ ಸೇರ್ಪಡೆಯಾಗಿರುವುದು ಪ್ರವೇಶಾತಿಗೆ ಬೇಡಿಕೆ ಹೆಚ್ಚಲು ಕಾರಣವಾಗಿದೆ ಎಂದು ಹಾಗೂ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾದ ಡಾ. ಹರೀಶ್ ತಿಳಿಸಿದ್ದಾರೆ.

ಹಾಸನ ಪ್ರಾದೇಶಿಕ ಕೇಂದ್ರದ ವಿಶಾಲ ಕಟ್ಟಡದಲ್ಲಿ ಇದೀಗ ಬಿಎ/ಬಿಕಾಂ, ಎಂ.ಎಲ್.ಐ.ಸಿ., ಬಿ.ಎಲ್.ಐ.ಸಿ. ಮತ್ತು ಎಂಎಸ್ಸಿ ಕೋರ್ಸುಗಳಿಗೆ ಪ್ರಾವೇಶಾತಿ ಪಡೆಯಲು ಅಭ್ಯಥಿಗಳು ಆಗಮಿಸುತಿದ್ದು ಈಗಾಗಲೇ 600 ಮಂದಿ ವಿದ್ಯಾರ್ಥಿಗಳು ವಿವಿಧ ಶೈಕ್ಷಣಿಕ ಕೋರ್ಸುಗಳಿಗೆ ಪ್ರಾವೇಶಾತಿ ಪಡೆಯುತ್ತಿದ್ದಾರೆ ಎಂದು ಡಾ. ಹರೀಶ್ ತಿಳಿಸಿದ್ದಾರೆ.

ಹಾಸನ ಪ್ರಾದೇಶಿಕ ಕೇಂದ್ರವು ಅರಸೀಕೆರೆ ರಸ್ತೆ ಬಿ.ಟಿ. ಕೊಪ್ಪಲು ಕೇಂದ್ರಿಯ ವಿದ್ಯಾಲಯದ ಹತ್ತಿರ, ಎಸ್.ಎಂ. ಕೃಷ್ಣನಗರ ಇಲ್ಲಿ ತನ್ನ ಕಾರ್ಯವನ್ನು ಪ್ರಾರಂಭಿಸಿದೆ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಇನ್ನು ಮುಂದೆ ಪರೀಕ್ಷೆಗಳು, ತರಗತಿಗಳು, ಈ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾದೇಶಿಕ ಕೇಂದ್ರದಲ್ಲೆ ನಿರ್ವಹಿಸಲಾಗುವುದು ಹಾಗೂ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ಸಿದ್ದ ಪಾಠ ಗುರುತಿಸಿ ಚೀಟಿಯನ್ನು ನೀಡಲಾಗುತ್ತದೆ, ಹಾಗೂ ವಿದ್ಯಾಥಿಗಳ ಅನುಕೂಲಕ್ಕಾಗಿ ಅ. 20ರಂದು ಅವರಿಗೆ ಎಲ್ಲಾ ಕೋಸುಗಳಿಗೆ ಪ್ರವೇಶಾತಿ ನಡೆಯುತ್ತದೆ ಹಾಗೂ ಎಲ್ಲಾ ರಜಾ ದಿನಗಳಲ್ಲಿಯೂ ಕಚೇರಿ ತೆರೆದಿರುತ್ತದೆ.

ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಭಾನುವಾರ ಸಹಿತ ಎಲ್ಲಾ ಬ್ಯಾಂಕ್ ರಜಾ ದಿನಗಳಲ್ಲಿ ಕಚೇರಿಯಲ್ಲೇ ಶುಲ್ಕ ಪಾವತಿಸಿಕೊಂಡು ಪ್ರವೇಶಾತಿ ನೀಡಲಾಗುತ್ತದೆ. ಆಸಕ್ತ ವಿದ್ಯಾರ್ಥಿಗಳು ಃ.ಂ/ಃ.ಅom, ಒ.ಂ/ಒ.ಅom, ಃ.ಐ.I.Sಛಿ., ಒ.ಐ.I.Sಛಿ., ಒ.Sಛಿ (ಇಟಿviಡಿoಟಿomeಟಿಣಚಿಟ Sಛಿieಟಿಛಿe) ಕೋರ್ಸ್‍ಗಳಿಗೆ ನಿಗಧಿತ ಶುಲ್ಕ ಪಾವತಿಸಿ ಪ್ರವೇಶಾತಿ ಪಡೆಯಬಹುದು, ಬಿ.ಪಿ.ಎಲ್., ಪಡಿತರ ಚೀಟಿ ಹೊಂದಿರುವ ಮಹಿಳಾ ವಿಧ್ಯಾರ್ಥಿನಿಯರಿಗೆ ಬೋಧನಾ ಶುಲ್ಕದಲ್ಲಿ ಶೇ 25% ರಿಯಾಯಿತಿ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಹೆಚ್ಚಿನ ಮಾಹಿತಿಗಾಗಿ 9482603060/8904036090.

Leave a Reply

Your email address will not be published. Required fields are marked *