ಅಲರ್ಜಿ ನಿವಾರಿಸುವ ತುಂಬೆ ಗಿಡ ಈ ಹತ್ತು ರೋಗಗಳಿಗೆ ರಾಮಬಾಣ..!

ದೇಹದ ಯಾವ ಭಾಗದಲ್ಲಾದರು ಗಾಯವಾಗಿದ್ದರೆ ತುಂಬೆ ಗಿಡವನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಕಷಾಯ ಮಾಡಿ. ಈ ಕಷಾಯವನ್ನು ಸೋಸಿ ನಂತರ ಅದರಿಂದ ಗಾಯವನ್ನು ತೊಳೆದರೆ ಗಾಯ ಬೇಗ ಮಾಯುತ್ತದೆ .ಬಿಳಿಸ್ರಾವ ಹೆಚ್ಚಾಗಿ ಆಗುತ್ತಿದ್ದರೆ ತುಂಬೆ ಎಲೆಗಳನ್ನು ಬೇಯಿಸಿ ಅನ್ನದ ಜತೆ ಸೇವಿಸಿದರೆ ಬಿಳಿಸ್ರಾವ ಕಡಿಮೆಯಾಗುತ್ತದೆ.
ಚರ್ಮದ ಮೇಲೆ ತುಂಬೆ ಎಲೆಯ ಪೇಸ್ಟ್‌ ಲೇಪಿಸಿದರೆ ಅಲರ್ಜಿ ಕಡಿಮೆಯಾಗುತ್ತದೆ.ಹೆಚ್ಚಾಗಿ ಬಾಯಾರಿಕೆ ಆಗುತ್ತಿದ್ದರೆ ತುಂಬೆ ಹೂಗಳನ್ನು ಒಂದು ಲೋಟ ನೀರಲ್ಲಿ ಕುದಿಸಿ ಅರ್ಧ ಲೋಟಕ್ಕೆ ಇಳಿಸಿ. ಈ ಕಷಾಯವನ್ನು ದಿನಕ್ಕೆ 2 ರಿಂದ 3 ಬಾರಿ ಸೇವಿಸಿದರೆ ಬಾಯಾರಿಕೆ ನಿವಾರಣೆಯಾಗುತ್ತದೆ.
ತುಂಬೆ ಗಿಡವನ್ನು ಬೇರು ಸಹಿತ ನೀರಲ್ಲಿ ಹಾಕಿ ಕಷಾಯ ಮಾಡಿ ಅದಕ್ಕೆ ಸೈಂಧವ ಉಪ್ಪು ಹಾಕಿ ಸೇವಿಸಿದರೆ ಜೀರ್ಣ ಶಕ್ತಿ ಹೆಚ್ಚಾಗುತ್ತದೆ.ತುಂಬೆ ಗಿಡವನ್ನು ಒಣಗಿಸಿ ಪುಡಿ ಮಾಡಿ. ಆ ಪುಡಿಗೆ ಬೇವಿನ ಪುಡಿ ಸೇರಿಸಿ ನೀರಲ್ಲಿ ಹಾಕಿ ಕಷಾಯ ತಯಾರಿಸಿ ನಿಯಮಿತವಾಗಿ ಸೇವಿಸಿದರೆ ರಕ್ತ ಶುದ್ಧಿಯಾಗುತ್ತದೆ.

Leave a Reply

Your email address will not be published. Required fields are marked *