ರೈತರ ಅನುಕೂಲಕ್ಕಾಗಿ ಬೆಳೆ ದರ್ಶಕ್ ಆಪ್ ಬಿಡುಗಡೆ

ಕೊಡಗು ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಈಗಾಗಲೇ ರೈತರು ಬೆಳೆದಿರುವ ಬೆಳೆಗಳನ್ನು ಸಮೀಕ್ಷೆ ಮಾಡಲಾಗುತ್ತಿದ್ದು, ರೈತರಿಗೆ ಸರ್ವೆ ಕಾರ್ಯದ ಮಾಹಿತಿ ಪಡೆಯಲು ಸರ್ಕಾರವು ಉಪಯುಕ್ತವಾದ ‘ಬೆಳೆ ದರ್ಶಕ್ ಆಪ್’ ಅನ್ನು ರೂಪಿಸಿದ್ದು, ಈ ಆಪ್‍ನ್ನು ಗೂಗಲ್‍ಪ್ಲೇ ಸ್ಟೋರ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದ್ದು, ರೈತರು ತಾವು ಬೆಳೆದಿರುವ ಬೆಳೆಯನ್ನು ಸಮೀಕ್ಷೆ ಮಾಡುವ ಸಂಬಂಧಪಟ್ಟ ಸರ್ವೇಯರ್‍ಗಳ ವಿವರಗಳನ್ನು (ಹೆಸರು ಮತ್ತು ಮೊಬೈಲ್ ನಂಬರ್) ಬೆಳೆ ದರ್ಶಕ್ ಆಪ್ ಉಪಯೋಗಿಸಿಕೊಂಡು, ಸರ್ವೇಯರ್‍ಗಳನ್ನು ಸಂಪರ್ಕಿಸಿ, ಸರ್ವೇ ಕಾರ್ಯವನ್ನು ಕೈಗೊಳ್ಳಲು ತಿಳಿಸಬಹುದು. ಹಾಗೆಯೇ ಈ ಆಪ್ ಬಳಸಿ ತಮ್ಮ ಜಮೀನಿನ ಸರ್ವೇ ಆಗಿದೆಯೇ ಅಥವಾ ಮಾಹಿತಿ ಸರಿಯಾಗಿ ದಾಖಲಾಗಿದೆಯೇ ಎಂದು ಖಾತ್ರಿಪಡಿಸಿಕೊಳ್ಳಬಹುದು ಮತ್ತು ಬೆಳೆ ತಪ್ಪಾಗಿ ನಮೂದಿಸಿದ್ದಲ್ಲಿ ತಾಲ್ಲೂಕು ಕಚೇರಿಯನ್ನು ಹಾಗೂ ಗ್ರಾಮ ಲೆಕ್ಕಾಧಿಕಾರಿಯವರನ್ನು ಸಂಪರ್ಕಿಸಬಹುದಾಗಿದೆ. ತಾಲ್ಲೂಕುವಾರು ಸರ್ವೇಯರ್‍ಗಳ ಮಾಹಿತಿಯು ಜಿಲ್ಲಾಧಿಕಾರಿಯವರ hಣಣಠಿs://ಞoಜಚಿgu.ಟಿiಛಿ.iಟಿ ವೆಬ್‍ಸೈಟ್‍ನಲ್ಲಿಯು ಲಭ್ಯವಿರುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *