ಸ್ವ-ಉದ್ಯೋಗ ಕೈಗೊಳ್ಳಲು ಸಹಾಯಧನಕ್ಕೆ ಅರ್ಜಿ ಆಹ್ವಾನ

ಕೊಡಗು ಜಿಲ್ಲೆಯಲ್ಲಿ 2018-19ನೇ ಸಾಲಿನ ಮುಖ್ಯಮಂತ್ರಿಯವರ ಉದ್ಯೋಗ ಸೃಜನ ಯೋಜನೆ (ಸಿ.ಎಂ.ಇ.ಜಿ.ಪಿ) ಯಡಿ ಗ್ರಾಮೀಣ ಪ್ರದೇಶದ ಸಾಮಾನ್ಯ ವರ್ಗದ 18 ರಿಂದ 35 ವರ್ಷ ವಯೋಮಿತಿಯ ಹಾಗೂ ವಿಶೇಷ ವರ್ಗದ (ಎಸ್.ಸಿ/ಎಸ್.ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ವಿಕಲಚೇತನರು, ಮಾಜಿ ಸೈನಿಕರು ಮತ್ತು ಮಹಿಳೆಯರು) 18 ರಿಂದ 45 ವರ್ಷ ವಯೋಮಿತಿ ಹೊಂದಿದ ನಿರುದ್ಯೋಗಿ ಯುವಕ/ ಯುವತಿಯರಿಗೆ ಕಿರು ಕೈಗಾರಿಕಾ/ಸೇವಾ ಘಟಕ ಸ್ಥಾಪಿಸುವ ಮೂಲಕ ಸ್ವ-ಉದ್ಯೋಗ ಕೈಗೊಳ್ಳುವವರಿಗೆ ಬ್ಯಾಂಕಿನಿಂದ ಗರಿಷ್ಟ ರೂ. 10 ಲಕ್ಷ ಗಳವರೆಗಿನ ಸಹಾಯಧನ ಕಲ್ಪಿಸಲಾಗುತ್ತದೆ.
ಯೋಜನಾ ವೆಚ್ಚಕ್ಕೆ ಕನಿಷ್ಟ8ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು. ಹಾಗೂ ರೂ. 5 ಲಕ್ಷಗಳವರೆಗಿನ ಯೋಜನಾ ವೆಚ್ಚಕ್ಕೆ ಯಾವುದೇ ವಿದ್ಯಾರ್ಹತೆಯ ಅವಶ್ಯಕತೆ ಇರುವುದಿಲ್ಲ. ಈ ಯೋಜನೆಯಡಿ ಗರಿಷ್ಟ ಶೇ.25 ರಿಂದ ಶೇ.35 ರವರೆಗೆ ಸಹಾಯಧನವನ್ನು ನೀಡಲಾಗುವುದು. ಹಾಗೂ ಅರ್ಜಿ ಸಲ್ಲಿಸಲು ಯಾವುದೇ ಆದಾಯದ ಮಿತಿ ಇರುವುದಿಲ್ಲ. ಈ ಸೌಲಭ್ಯ ಪಡೆಯಲು ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ವೆಬ್‍ಸೈಟ್ ವಿಳಾಸ hಣಣಠಿ://ಛಿmegಠಿ.ಞಚಿಡಿ.ಟಿiಛಿ.iಟಿ ಆಗಿರುತ್ತದೆ.
ಆನ್‍ಲೈನ್ ಅರ್ಜಿಯನ್ನು ಸೂಕ್ತ ದಾಖಲಾತಿಗಳೊಂದಿಗೆ ದ್ವಿಪ್ರತಿಯಲ್ಲಿ ನವೆಂಬರ್, 13 ರೊಳಗೆ ಸಲ್ಲಿಸುವುದು. ಅಪೂರ್ಣವಾಗಿ ಭರ್ತಿ ಮಾಡಿದ ಹಾಗೂ ದಾಖಲೆಗಳನ್ನು ನೀಡದೇ ಇರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಡಗು ಜಿಲ್ಲೆ, ಮಡಿಕೇರಿ ಇವರ ಕಚೇರಿ ಹಾಗೂ ದೂ.ಸಂ. 08272-228431 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *