ಲೋಕಸಭಾ ಚುನಾವಣೆಗೆ ಬಿ.ಜೆ.ಪಿಯಿಂದ ಜಾವಗಲ್ ಶ್ರೀ ನಾಥ್ ಹಾಸನದಿಂದ ಸ್ಪರ್ಧೆ.?

🌹 ಕಾವೇರಿ ನ್ಯೂಸ್ 🌹: ಭಾರತೀಯ ಜನತಾ ಪಾರ್ಟಿ ಸದ್ಯ ರಾಜಕೀಯದಲ್ಲಿ ಇತಿಹಾಸ ನಿರ್ಮಿಸುತ್ತಿರುವ ಪಕ್ಷ. ದೇಶದ ಎಲ್ಲಾ ರಾಜ್ಯಗಳಲ್ಲೂ ತನ್ನ ವ್ಯಾಪಿಯನ್ನು ವಿಸ್ತರಿಸುತ್ತಿದೆ. ಮೋದಿಯವರ ವರ್ಚಸ್ಸು ಹಾಗೂ ಅಮಿತ್ ಶಾ ರ ಚಾಣಕ್ಷತನದಿಂದ ಬಿ.ಜೆ.ಪಿ ದೇಶದೆಲ್ಲೆಡೆ ಕಮಲವನ್ನು ಆರಳಿಸುತ್ತಿದೆ. ಇಂತಹ ಪ್ರಮುಖ ಪಕ್ಷಕ್ಕೆ ರಾಷ್ಟ್ರದ ಪ್ರಮುಖ ಕ್ಷೇತ್ರಗಳಲ್ಲಿ ಸಾಧನೆಗೈದವರು ಇಂದು ಬಿ.ಜೆ.ಪಿಗೆ ಸೇರುತ್ತಿದ್ದಾರೆ.
ಇತ್ತೀಚೆಗೆ ಭಾರತ ತಂಡದ ಪ್ರಮುಖ ಆಟಗಾರಾರದ ಎಂ.ಎಸ್.ಧೋನಿ ಹಾಗೂ ಗೌತಮ್ ಗಂಭೀರ್ ಬಿ.ಜೆ.ಪಿ ಸೇರಲಿದ್ದಾರೆ ಅನ್ನುವ ಸುದ್ದಿ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಈಗ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ. ಭಾರತ ತಂಡಕ್ಕೆ ಶ್ರೇಷ್ಠ ಕೊಡುಗೆಯನ್ನು ನೀಡಿದ ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರ ಜಾವಗಲ್ ಶ್ರೀ ನಾಥ್ ಲೋಕಸಭೆಗೆ ನಮ್ಮ ಕರ್ನಾಟಕದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ
ಜಾವಗಲ್ ಶ್ರೀ ನಾಥ್ ಜೆಡಿಎಸ್ ಭದ್ರ ಕೋಟೆ ಹಾಸನದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತು ಸದ್ಯ ಕೇಳಿಬರುತ್ತಿದೆ. ಹಾಸನದಲ್ಲಿ ದೇವೆಗೌಡರ ಮೊಮ್ಮಗೆ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದರೆ ಅವರ ವಿರುದ್ದವಾಗಿ ಬಿ.ಜೆ.ಪಿಯಿಂದ ಶ್ರೀ ನಾಥ್ ಅವರನ್ನು ಕಣಕ್ಕೆ ಇಳಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಮೂಲತಃ ಶ್ರೀ ನಾಥ್ ರವರು ಹಾಸನದವರಾಗಿರುವುದರಿಂದ ತನ್ನ ಸ್ವ ಕೇತ್ರದಲ್ಲಿ ಸ್ಪರ್ಧಿಸಿದರೆ ಗೆಲುವು ಸುಲಭವಾಗಿ ದೊರೆಯಬಹುದು ಎಂಬುದು ಬಿ.ಜೆ.ಪಿಗರ ಲೆಕ್ಕಚಾರ. ಒಟ್ಟಾರೆಯಾಗಿ ದೇಶದ ಖ್ಯಾತನಾಮರು ಬಿ.ಜೆ.ಪಿ ಸೇರುತ್ತಿರುವುದು ಮೋದಿಯವರ ಆಡಳಿತಕ್ಕೆ ಬೆಂಬಲ ಸೂಚಿಸಿದಂತೆ ಕಾಣುತ್ತಿದೆ.

Leave a Reply

Your email address will not be published. Required fields are marked *