1,398 ರೈತರ ಸಾಲ ತೀರಿಸಿದ ಬಿಗ್​ ಬಿ, ರೈತರ ಖುದ್ದು ಭೇಟಿಗೆ ಮುಂದಾದ ಅಮಿತಾಬ್​

ಮುಂಬೈ: ಉತ್ತರ ಪ್ರದೇಶದ 1,398 ರೈತರು ವಿವಿಧ ಬ್ಯಾಂಕ್​ಗಳಲ್ಲಿ ಮಾಡಿಕೊಂಡಿದ್ದ ಸಾಲವನ್ನು ಬಿಗ್​ ಬಿ ಅಮಿತಾಬ್​ ಬಚ್ಚನ್​ ಪಾವತಿಸಿದ್ದಾರೆ. 1398 ರೈತರ ಬೆಳೆ ಸಾಲವನ್ನ ತೀರಿಸಿದ ಬಳಿಕ, ರೈತರನ್ನು ಖುದ್ದಾಗಿ ಭೇಟಿ ಮಾಡಿ ಬ್ಯಾಂಕ್​ ಋಣಮುಕ್ತ ಸಾಲ ಪತ್ರ ನೀಡಲಿದ್ದಾರೆ. ಇದಕ್ಕಾಗಿ ಅಮಿತಾಬ್​ ಬಚ್ಚನ್​ ಸುಮಾರು 70 ರೈತರಿಗೆ ಮುಂಬೈ ಆಗಮಿಸಲು ಟ್ರೈನ್​ ಟಿಕೆಟ್​ ಬುಕ್​ ಮಾಡಿ ಕರೆಯಿಸಿಕೊಳ್ಳಲಿದ್ದಾರೆ.
ಬಿಗ್​​ ಬಿ ಈ ಹಿಂದೆ ತಮ್ಮ ಕರ್ಮಭೂಮಿ ಮಹಾರಾಷ್ಟ್ರದಲ್ಲಿ ಹುತಾತ್ಮ ರೈತರಿಗೂ ಸಹಾಯ ಮಾಡಿದ್ದರು. ಇದಾದ ಬಳಿಕ ಈಗ ಅವರು ಮಾತೃ ಭೂಮಿಯ ಸುಮಾರು ಸಾವಿರಕ್ಕೂ ಹೆಚ್ಚು ರೈತರ ಬೆಳೆ ಸಾಲ ತೀರಿಸುವ ತೀರ್ಮಾನ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಉತ್ತರಪ್ರದೇಶದ ವಿವಿಧ ಜಿಲ್ಲೆಗಳ 1,398 ರೈತರು ನಾನಾ ಬ್ಯಾಂಕ್​ಗಳಲ್ಲಿ ಮಾಡಿದ್ದ ₹ 4.05 ಕೋಟಿ ರೂ.ನಷ್ಟು ಬೆಳೆ ಸಾಲವನ್ನು ಬಿಗ್​ ಬಿ ತೀರಿಸಿದ್ದಾರೆ. ಇಷ್ಟು ಹಣವನ್ನು ಒಂದೇ ಕಂತಿನಲ್ಲಿ ಹಣ ಕಟ್ಟುವ ಯೋಜನೆಯಡಿ (ಒಟಿಎಸ್​) ಒಪ್ಪಂದ ಮಾಡಿಕೊಂಡು ಪಾವತಿಸಿದ್ದಾರೆ. ರೈತರನ್ನು ಖುದ್ದಾಗಿ ಭೇಟಿ ಮಾಡಿ ಅವರ ಋಣಮುಕ್ತ ಬ್ಯಾಂಕ್​ ಸಾಲ ಪತ್ರ ನೀಡಲು 70 ರೈತರಿಗೆ ಮುಂಬೈ ಟ್ರೈನ್​ ಟಿಕೆಟ್ ನೀಡಿ ತಮ್ಮ ಕಚೇರಿಗೆ ಆಹ್ವಾನಿಸಿದ್ದಾರೆ. ನವೆಂಬರ್ 26ರಂದು ಈ ಪತ್ರಗಳು ನೀಡಲಿದ್ದಾರೆ ಎಂದು ಬಿಗ್​ ಬಿ ವಕ್ತಾರ ತಿಳಿಸಿದ್ದಾರೆ.

Leave a Reply

Your email address will not be published. Required fields are marked *