ಶಾಸಕ ಪ್ರೀತಂ ಗೌಡರ ನಾಯಕತ್ವದಲ್ಲಿ ಹಾಸನ ರಾಜಕೀಯದಲ್ಲಿ ಬೀಸುತ್ತಿದೆ ಬದಲಾವಣೆ ಗಾಳಿ

🌹 ಕಾವೇರಿ ನ್ಯೂಸ್ 🌹
ಬಿಜೆಪಿಯಲ್ಲಿ ಈಗ ಹೊಸ ನಾಯಕನ ಉದಯವಾಗಿದೆ. ಬಿಜೆಪಿ ಯಾವ ಕ್ಷೇತ್ರದ ಗೆಲ್ಲುವು ಸಾಧ್ಯವಿಲ್ಲವೋ ಆ ಕ್ಷೇತ್ರಗಳಿದ್ದು ಜೆಡಿಎಸ್ಗೆ ಸೆಡ್ಡು ಹೊಡೆದದ್ದು ಮಾತ್ರವಲ್ಲ,ಕರ್ನಾಟಕಕ್ಕೆ ಅಚ್ಚರಿಯ ಫಲಿತಾಂಶವನ್ನು ನೀಡಿದ ಕ್ಷೇತ್ರ ಹಾಸನ ವಿಧಾನಸಭಾ ಕ್ಷೇತ್ರ. ಕರ್ನಾಟಕದಲ್ಲಿ ಜೆಡಿಎಸ್ ಅಧಿಕಾರ ನಡೆಸುತ್ತಿರಬಹುದು ಆದರೆ ಅದು ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ಜೆಡಿಎಸ್ಗೆ ಸೆಡ್ಡು ಹೊಡೆದಿದೆ. ಶಾಸಕ ಪ್ರೀತಂ ಗೌಡರ ನೇತೃತ್ವದಲ್ಲಿ ಬಿಜೆಪಿ ತನ್ನ ಅಡಿಪಾಯವನ್ನು ಭದ್ರಗೊಳಿಸುತ್ತಿದೆ.
ಇನ್ನೇನು ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ ಇಲ್ಲೂ ಸಹ ಬಿಜೆಪಿ ಮೈತ್ರಿ ಸರಕಾರಕ್ಕೆ ಸೆಡ್ಡು ಹೊಡೆಯಲು ತಯಾರು ನಡೆಸುತ್ತಿದೆ. ಒಕ್ಕಳಿಗ ಸಮಾಜದ ಸಿಟಿ ರವಿ ಅವರನ್ನು ಹಾಸನದ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಜೆಡಿಎಸ್ ಅಭ್ಯರ್ಥಿ ಎಂದೇ ಪರಿಗಣಿಸಲಾಗಿರುವ ಮಾಜಿ ಪ್ರಧಾನಿಗಳಿಗೆ ಸೆಡ್ಡು ಹೊಡೆಯಲು ಬಿಜೆಪಿ ಪ್ರಬಲ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ. ಇದು ಸಹ ಪ್ರೀತಂ ಗೌಡ ಹೆಸರು ಕೇಳಿಬರುತ್ತಿದೆ. ಕೆಲವು ಕಾಂಗ್ರೆಸ್ ಮುಖಂಡರುಗಳು ಸಹ ಬಿಜೆಪಿ ಸೇರುವ ಸಾಧ್ಯತೆ ಇದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ವೋಟುಗಳು ಛಿದ್ರವಾಗಿ ಬಿಜೆಪಿ ತೆಕ್ಕೆಗೆ ಬಿದ್ದಿದ್ದು. ಕಳೆದ ತಿಂಗಳು ನಡೆದ ಮಂಡ್ಯ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ನ ಮತಗಳು ಬಿಜೆಪಿ ಕಡೆವಾಲಿದ್ದವು.
ಕಳೆದ ಬಾರಿಯ ಚುನಾವಣೆಗಿಂತ ಈ ಬಾರಿಯ ಚುನಾವಣೆ ಭಾರೀ ಜಿದ್ದಾಜಿದ್ದಿನಿಂದ ಕೂಡಲಿದೆ. ಶಾಸಕ ಪ್ರೀತಮ್ ಗೌಡರ ನೇತೃತ್ವದಲ್ಲಿ ಹಾಸನದಲ್ಲಿ ಬಿಜೆಪಿ ಪ್ರಬಲವಾಗಿ ಬೆಳೆಯುತ್ತಿದ್ದು ಜೆಡಿಎಸ್ ಗೆ ಇದು ನುಂಗಲಾರದ ತುತ್ತಾಗಿದೆ. ರಾಜಕೀಯದಲ್ಲಿ ಏನೇನು ಬದಲಾವಣೆಯಾಗುತ್ತದೆ ಎಂಬುದು ಲೋಕಸಭಾ ಚುನಾವಣೆಯ ನಂತರವೇ ಗೊತ್ತಾಗಲಿದೆ. ಒಟ್ಟಿನಲ್ಲಿ ಹಾಸನ ರಾಜಕೀಯ ಬದಲಾವಣೆಯಾಗುವುದು ಬಹುತೇಕ ಖಚಿತವಾಗುತ್ತಿದೆ.

Leave a Reply

Your email address will not be published. Required fields are marked *