ಇನ್ನು ಅಶ್ಲೀಲ ವೀಡಿಯೋ ಸೆಂಡ್ ಮಾಡಿದರೆ ನಿಮ್ಮ ಅಕೌಂಟ್ ಬಂದ್ – ಕಾವೇರಿ ನ್ಯೂಸ್

ಹೊಸದೆಲ್ಲಿ: ಸಾಮಾಜಿಕ ಜಾಲತಾಣದಲ್ಲಿ ಅಪ್ರಾಪ್ತ ವಯಸ್ಸಿನವರ ಅಶ್ಲೀಲ ವೀಡಿಯೋಗಳನ್ನು ವೀಕ್ಷಿಸುವುದನ್ನು ಹೇಯ ಎಂದು ಬಣ್ಣಿಸಿರುವ ಜನಪ್ರಿಯ ಜಾಲತಾಣ ಸಂಸ್ಥೆಯಾದ ವಾಟ್ಸ್ಆಪ್, ತನ್ನ ಮೂಲಕ ಇಂತಹ ಅಸಹ್ಯ ಪ್ರವೃತ್ತಿ ಹರಡಲು ಅವಕಾಶ ನೀಡುವುದಿಲ್ಲ ಎಂದು ವಾಗ್ದಾನ ಮಾಡಿದೆ.

ಸರಕಾರ ಹಾಗೂ ಅಂತರ್ಜಾಲ ಕ್ಷೇತ್ರದ ದೈತ್ಯ ಸಂಸ್ಥೆಗಳಾದ ಗೂಗಲ್ ಫೇಸ್‍ಬುಕ್, ವಾಟ್ಸ್ಆಪ್ ಮುಂತಾದ ಸಾಮಾಜಿಕ ಜಾಲತಾಣಗಳು ಕೈ ಜೋಡಿಸುವ ಮೂಲಕ ಅಶ್ಲೀಲ ವೀಡಿಯೋ ಹರಡುವಿಕೆಯ ಪಿಡುಗನ್ನು ತೊಲಗಿಸಬೇಕೆಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ವಾಟ್ಸ್ಆಪ್ ಸಂಸ್ಥೆ ಅಶ್ಲೀಲ ದೃಶ್ಯಾವಳಿಗಳನ್ನು ರವಾನಿಸಿದವರ ವಾಟ್ಸ್ಆಪ್ ಖಾತೆಗಳನ್ನು ನಿಷೇಧಿಸಲಾಗುತ್ತದೆ ಎಂದು ಎಚ್ಚರಿಸಿದೆ.

Leave a Reply

Your email address will not be published. Required fields are marked *