ಸ್ವಚ್ಛತಾ ಕಾರ್ಯ ಕೈಗೊಂಡು ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಿದ ಟೀಂ ಮೋದಿ ಸಂಘಟನೆ

ಕೊಡಗು:- ಸ್ವಾಮಿ ವಿವೇಕಾನಂದರ 156 ನೇ ಜನ್ಮ ದಿನಾಚರಣೆಯ ಅಂಗವಾಗಿ ಟೀಮ್ ಮೋದಿ ಸಂಘಟನೆ ನೇತೃತ್ವದಲ್ಲಿ ಗೋಣಿಕೊಪ್ಪಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತೆ ಮಾಡುವುದರ ಮೂಲಕ ಜನ್ಮ ದಿನವನ್ನು ಆಚರಿಸಿದರು. ಅಲ್ಲದೆ ಆಸ್ಪತ್ರೆ ಸ್ವಚ್ಛವಾಗಿದ್ದರೆ ನಗರವೇ ಸ್ವಚ್ಛವಾಗಿರುತ್ತದೆ ಎಂಬ ಉದ್ದೇಶದಿಂದ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಬಿ.ಜೆ.ಪಿ ವಿರಾಜಪೇಟೆ ತಾಲ್ಲೂಕು ಉಪಾಧ್ಯಕ್ಷ ನೆಲ್ಲಿರ ಚಲನ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್, ಗ್ರಾಮ ಪಂಚಾಯಿತಿ ಸದಸ್ಯ ಮಂಜು ರೈ,ಟೀಮ್ ಮೋದಿ ಜಿಲ್ಲಾ ಪ್ರಮುಖರಾದ ಕುಲ್ ದೀಪ್ ಪೂಣಚ್ಚ , ತಾಲೂಕು ಪ್ರಮುಖರಾದ ಮಾಚ್ಚಿ ಟಿರ ಸಚಿನ್, ಚೆನ್ನಯನಕೋಟೆ ಗ್ರಾಮ ಪಂಚಾಯತಿ ಸದಸ್ಯ ಕುಯಮುಡಿ ರತನ್, ಭರತ್, ಪುನೀತ್, ಆಂಟೋನಿ, ಪ್ರವೀಣ್ ಪೂಜಾರಿ, ಮಂಜು, ಪುಷ್ಪರಾಜ್,ಸಚಿನ್ , ಹಾಗೂ ಐವತ್ತಕ್ಕೂ ಅಧಿಕ ಸದಸ್ಯರು ಉಪಸ್ಥಿತರಿದ್ದರು.

ವರದಿ – ಹೋಮೇಶ್,ಮಣಗಲಿ.

Leave a Reply

Your email address will not be published. Required fields are marked *